ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಥೈಲ್ಯಾಂಡ್ನ ಒಂದು ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. 18 ವರ್ಷದ ಬಂದೂಕುಧಾರಿಯೊಬ್ಬ ಶಾಲಾ ಆವರಣಕ್ಕೆ ನುಗ್ಗಿ ಗುಂಡು ಹಾರಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿಟ್ಟ ಘಟನೆ ಹ್ಯಾಟ್ ಯೈ ಜಿಲ್ಲೆಯ ಪಟೋಂಗ್ ಪ್ರಥಾನ್ ಕಿರಿವತ್ ಶಾಲೆಯಲ್ಲಿ ನಡೆದಿದೆ.
ತರಗತಿಗಳು ಮುಗಿದ ಬಳಿಕ ಆತನ ದಾಳಿ ಆರಂಭವಾಗಿದ್ದು, ಮೊದಲು ಶಾಲಾ ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿಗೂ ಗುಂಡೇಟು ತಗುಲಿದಂತೆ ವರದಿಯಾಗಿದೆ. ಮೈದಾನದಲ್ಲಿ ಗುಂಡು ಹಾರಿಸುತ್ತಿದ್ದ ದೃಶ್ಯ ನೋಡಿ ವಿದ್ಯಾರ್ಥಿಗಳು ಭಯದಿಂದ ಓಡಿದ್ದಾರೆ. ಕೆಲವರು ಆತನ ಕೈಗೆ ಸಿಕ್ಕಿಬಿದ್ದಿದ್ದರು.
ಇದನ್ನೂ ಓದಿ:
ಸಾಂಗ್ಖ್ಲಾ ಪ್ರಾಂತ್ಯದಲ್ಲಿ ನಡೆದ ಈ ಘಟನೆ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಒತ್ತೆಯಾಳಾಗಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.



