ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಕಳೆದ ರಾತ್ರಿ ಗುಂಡಿನ ದಾಳಿ ನಡೆದಿದೆ.
ಬುಧವಾರ ರಾತ್ರಿ ಕಡಗಂಚಿ ಗ್ರಾಮದ ಮನೆಯೊಂದರಲ್ಲಿ ಗುಂಡಿನ ಪಾರ್ಟಿ ಮಾಡುವಾಗ ಈ ಘಟನೆ ನಡೆದಿದ್ದು , ಶ್ರೀಕಾಂತ್, ಮಾಳಪ್ಪ, ಕಾಂತಪ್ಪ, ಸೇರಿದಂತೆ ಆರೇಳು ಜನ ಸೇರಿಕೊಂಡು ಪಾರ್ಟಿ ಮಾಡ್ತಿದ್ದರು.
ಈ ವೇಳೆ ಜಗಳ ಉಂಟಾಗಿ ಶ್ರೀಕಾಂತ್ ಎಂಬುವರ ಮೇಲೆ ಗುಂಡಿನ ದಾಳಿಯಾಗಿದೆ. ಹಾಗೂ ಎಡಗೈ ಗೆ ಒಂದು ಗುಂಡು ತಾಗಿದ್ದು ಕಲಬುರಗಿಯ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡಿನ ದಾಳಿ ಮಾಡಿದ ಗನ್ ಸಹಿತ ಆರೋಪಿಗಳಾದ ಕಾಂತಪ್ಪ, ಮಾಳಪ್ಪ ಪೋಲಿಸರ ವಶಕ್ಕೆ ಪಡೆಯಲಾಗಿದೆ. ನರೋಣಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.