ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ತಿಳಿದುಬಂದಿದೆ.
ನ್ಯೂ ಹೆವನ್ ಅಪಾರ್ಟ್‌ಮೆಂಟ್‌ನಲ್ಲಿದ್ದ ಮೃತದೇಹವನ್ನು ಇಳಿಸಿದ ಬಳಿಕ ಸಂಜೆ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಯಿತು. ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸಾವನ್ನಪ್ಪಿ 78 ಗಂಟೆಗಳು ಆಗಿದ್ದು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ದೇಹ ಉಸಿರುಗಟ್ಟಿ ಪ್ರಾಣ ಹೋಗಿದೆ. ದೇಹ ಕೊಳೆತು ಹೋಗಿದ್ದರಿಂದ ರಕ್ತ ಹೊರಬಂದಿದೆ.
ಹೊಟ್ಟೆಯಲ್ಲಿದ್ದ ದ್ರವ ರೂಪ ಮತ್ತು ಆಹಾರ ಪದಾರ್ಥವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಮಾತ್ರೆ ಸೇವನೆ ಮಾಡಿದ್ದಾರಾ ಎನ್ನುವುದು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಬಯಲಾಗಬೇಕಿದೆ.