ಹೊಸ ದಿಗಂತ ವರದಿ, ಶಿರಸಿ:
ನಗರದಲ್ಲಿ ಸುರಿಯುತ್ತಿರುವ ಮಳೆಯು ನಗರದಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯ ಗುಣಮಟ್ಟ ಅನಾವರಣಗೊಳಿಸಿತು.
ಯಲ್ಲಾಪುರ ರಸ್ತೆಯಲ್ಲಿ ಗಟಾರ ಕಾಮಗಾರಿ ಪೂರ್ಣಗೊಂಡರೂ ಗಟಾರದಲ್ಲಿ ಮಳೆಯ ನೀರು ಹರಿಯಲಾಗದೇ ರಸ್ತೆಯಲ್ಲೇ ಹರಿಯಿತು. ಇದರಿಂದಾಗಿ ಗಟಾರ ಖುಲ್ಲಾಗೊಳಿಸಲು ಜೆಸಿಬ ಬಳಸಲಾಯಿತು. ರಸ್ತೆ ಪಕ್ಕದಲ್ಕಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳು ಬಾಗತೊಡಗಿವೆ. ಕೆಲವೊಂದು ಕಡೆ ಗಟಾರ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಮಳೆಯ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ಪಾದಚಾರಿಗಳು ಹಾಗೂ ವಾಹನದಾರರಿಗೆ ತೀವ್ರ ತೊಂದರೆಯುಂಟಾಯಿತು.
ಕಾಮಗಾರಿಯ ಗುಣಮಟ್ಟದ ಬಗ್ಗೆ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ