ಗ್ಯಾನವಾಪಿ ಪ್ರಕರಣದ ವಿಚಾರಣೆ ಮೇ.26 ಕ್ಕೆ ಮುಂದೂಡಿದ ವಾರಣಾಸಿ ನ್ಯಾಯಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಗ್ಯಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯವು ಮೇ 26 ಕ್ಕೆ ಮುಂದೂಡಿದೆ.
ಮೇ 26 ರಂದು ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ಅನುಸಾರವಾಗಿ ಆದೇಶ 7, ನಿಯಮ 11 ರ ಅಡಿಯಲ್ಲಿ ಮುಸ್ಲಿಂ ಅರ್ಜಿದಾರ ಅರ್ಜಿದಾರರ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಳ್ಳಲಿದೆ.
ಮೇ 26ರಂದು ಪ್ರಾಥಮಿಕ ವಾದಗಳು ಆರಂಭವಾಗಲಿವೆ. ಸುಪ್ರೀಂ ನೇಮಿಸಿದ್ದ ಆಯೋಗ ಸಲ್ಲಿಸಿರುವ ಜ್ಞಾನವಾಪಿ ಮಸೀದಿ ಸಮೀಕ್ಷಾ ವರದಿ ಕುರಿತಾಗಿ ಅಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ವಾರಣಾಸಿ ನ್ಯಾಯಾಲಯವು ಎರಡೂ ಪಕ್ಷಗಳಿಗೆ ಸೂಚಿಸಿದೆ. ಈ ವರದಿಗೆ ಆಕ್ಷೇಪಣೆಗಳಿದ್ದರೆ 7 ದಿನಗಳೊಳಗೆ ಸಲ್ಲಿಸುವಂತೆ ಆದೇಶಿಸಲಾಗಿದೆ. 1991 ರ ಪೂಜಾ ಸ್ಥಳ ಕಾಯ್ದೆಯಿಂದ ಈ ಮೊಕದ್ದಮೆಯನ್ನು ನಿರ್ಬಂಧಿಸಲಾಗಿದೆ ಮುಸ್ಲಿಮರ ಕಡೆಯವರು ವಾದಿಸುವ ಸಾಧ್ಯತೆಗಳಿವೆ.

ಗ್ಯಾನವಾಪಿ ಪ್ರಕರಣವೇನು?
16ನೇ ಶತಮಾನದಲ್ಲಿ ಮೊಗಲ್‌ ಅರಸ ಔರಂಗಜೇಬನ ಆಳ್ವಿಕೆಯಲ್ಲಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಔರಂಗಜೇಬನ ಆದೇಶದ ಮೇರೆಗೆ ಗ್ಯಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ವಾರಣಾಸಿ ನ್ಯಾಯಾಲಯದಲ್ಲಿ 1991 ರಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿದಾರರು ಮತ್ತು ಸ್ಥಳೀಯ ಅರ್ಚಕರು ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ಪೂಜೆ ಸಲ್ಲಿಸಲು ಅರ್ಜಿಯಲ್ಲಿ ಅನುಮತಿ ಕೋರಿದ್ದರು. ಅಲಹಾಬಾದ್ ಹೈಕೋರ್ಟ್ 2019 ರಲ್ಲಿ ಅರ್ಜಿದಾರರು ಕೋರಿದ್ದ ಎಎಸ್‌ಐ ಸಮೀಕ್ಷೆಗೆ ತಡೆಯಾಜ್ಞೆ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!