ಹೆಚ್.ಡಿ. ಕುಮಾರಸ್ವಾಮಿ ಜನತಾ ದರ್ಶನದಲ್ಲಿ ಬಂತು 3 ಸಾವಿರಕ್ಕೂ ಅಧಿಕ ಅರ್ಜಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜನತಾ ದರ್ಶನದಲ್ಲಿ 3000ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಖುದ್ದು ನಾನೇ 7 ಗಂಟೆಗಳ ಕಾಲ ಜನತೆಯ ಅಹವಾಲು ಸ್ವೀಕರಿಸಿದ್ದೇನೆ. ಆ ಪೈಕಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಅರ್ಜಿ ಬಂದಿವೆ, ಕೆಲವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ, ನಿರುದ್ಯೋಗಿ ಸಮಸ್ಯೆ ಬಗ್ಗೆ ಯುವಕ ಯುವತಿಯರು ಅರ್ಜಿ ಕೊಟ್ಟಿದ್ದಾರೆ, ಇನ್ನು ಕೆಲವರು ಆರೋಗ್ಯ ಸಮಸ್ಯೆ ಸಂಬಂಧ ಅರ್ಜಿ ಕೊಟ್ಟಿದ್ದಾರೆ. ಅದರಲ್ಲೂ 40ಕ್ಕೂ ವಿಶೇಷ ಚೇತನರ ಅರ್ಜಿಗಳು ಬಂದಿವೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಇಂದು ಮಂಡ್ಯ ಜಿಲ್ಲೆಯಲ್ಲಿ ಜನತಾ ದರ್ಶನದ ಬಳಿಕ ಮಾತನಾಡಿದ ಸಚಿವರು, ಇಂದು ಕೋರ್ಟ್ ವ್ಯಾಜ್ಯ ಹೊರತುಪಡಿಸಿ ಉಳಿದ ಎಲ್ಲ ಅರ್ಜಿಯೂ ವಿಲೇವಾರಿಯಾಗುವ ಅರ್ಜಿಗಳೇ ಬಂದಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಲು ನನಗೆ ಎರಡು ಮೂರು ತಿಂಗಳು ಕಾಲ ಸಮಯಾವಕಾಶ ಬೇಕು ಎಂದರು.

ಜನತಾ ದರ್ಶನಕ್ಕೆ ಅಧಿಕಾರಿಗಳನ್ನು ಹೋಗದಂತೆ ಸುತ್ತೋಲೆ ಹೊರಡಿಸಿದ್ದಾರೆ. ನನಗೆ ಜನತಾ ದರ್ಶನ ನಡೆಸಲು ಪವರ್ ಇಲ್ಲ.ಕಳೆದ ಚುನಾವಣೆಗೆ ಮುನ್ನ ಬೆಂಗಳೂರು ಗ್ರಾಮಾಂತರದ ಅಂದಿನ ಸಂಸದ ಸಭೆ ಮಾಡಿದ್ರು. ಹಳ್ಳಿಹಳ್ಳಿಗೆ ಅಧಿಕಾರಿಗಳನ್ನ ಕರೆದುಕೊಂಡು ಹೋಗಿದ್ರು. ಆದರೆ ಕುಮಾರಸ್ವಾಮಿ‌ ಜನತಾ ದರ್ಶನ ಮಾಡ್ತಿದ್ದಾನೆ ಎಂದು ತರಾತುರಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಜನತೆಯಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಜನತಾ ದರ್ಶನ ಮಾಡುವ ಅವಕಾಶವಿದೆ. ಈ ರಾಜ್ಯ ಸರ್ಕಾರಕ್ಕೆ ಅಲ್ಪ ಸ್ವಲ್ಪನಾದ್ರು ಜ್ಞಾನ ಇದಿಯಾ? ಎಂದು ಡಿಕೆ ಸುರೇಶ್ ನಡೆಸಿದ್ದ ಸಭೆ ಪೋಟೋ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ಯಾವನು ಅವರಿಗೆ ಅಧಿಕಾರ ಕೊಟ್ಟವನು? ರಾಜ್ಯ ಸರ್ಕಾರದ ಪ್ರೋಟೊಕಾಲ್ ನಂಬಿ ನಾನು ರಾಜಕಾರಣ ಮಾಡುತ್ತಿಲ್ಲ. ಇವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಅದರಲ್ಲಿ ಸಂಶಯವೇ ಇಲ್ಲ. ಅಧಿಕಾರಿಗಳನ್ನ ರಾತ್ರೋ ರಾತ್ರಿ ವರ್ಗಾವಣೆ ಮಾಡ್ತಿದ್ದಾರೆ. HMT ಯ ಭೂಮಿಯನ್ನ‌ ಯಾರ್ಯಾರು ಹೊಡೆದಿದ್ದೀರಿ? ಅದರ ಬಗ್ಗೆ ತನಿಖೆ ಮಾಡ್ತೀರಾ ಎಂದು ಸವಾಲು ಹಾಕಿದ ಸಚಿವರು, ರಾಜ್ಯ ಸರ್ಕಾರಕ್ಕೆ ಬರ್ತಿದ್ದ ಆದಾಯದ ಬಗ್ಗೆ ಚಿಂತೆ ಮಾಡಿದ್ದೀರ? ನಾನೇನು ಕಡುಬು ತಿನ್ನಲು ಕುಳಿತಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಜಾಗಟೆ ಬಾರಿಸಿಕೊಂಡು ಹೋದ್ರು. ಆದರೆ ರಾಜ್ಯಕ್ಕೆ ಅನ್ಯಾಯವಾಗಿರೋದು ಇವರಿಂದಲೇ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!