ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ ಎಂಬ ಡಿಕೆ ಶಿವಕುಮಾರ ಹೇಳಿಕೆಗೆ ತಿರುಗೇಟು ನೀಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, ಹುಚ್ಚು ಹಿಡಿದಿರೋದು ನನಗಲ್ಲ ಡಿಕೆ ಶಿವಕುಮಾರ್‌ಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ ಎಂದು ತಿರುಗೇಟು ನೀಡಿದರು.
ಇಂದು ಮಂಡ್ಯ ಜಿಲ್ಲೆಯಲ್ಲಿ ಜನತಾ ದರ್ಶನದ ಬಳಿಕ ಮಾತನಾಡಿದ ಸಚಿವರು, ಚನ್ನಪಟ್ಟಣಕ್ಕೆ ಹೋಗಿ ಹುಚ್ಚ ಯಾರೆಂದು ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ. ಪರೋಕ್ಷವಾಗಿ ಡಿಕೆಶಿಯೇ ಹುಚ್ಚ ಎಂದ ಹೆಚ್‌ಡಿ ಕುಮಾರಸ್ವಾಮಿಯವರು, ನಾನು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕೆಲಸ ಮಾಡ್ತಿದ್ದೇನೆ. ಮುಡಾ ಹಗರಣಕ್ಕೆ ಮೂಲ ಪುರುಷರು ಯಾರು? ನನಗೆ ರಾಜಕಾರಣ ಗೊತ್ತಿಲ್ವ? ಒಂದಷ್ಟು ದಿನ ದೇವೇಗೌಡರ ಕುಟುಂಬ ಮೇಲೆ ಆರೋಪ ಬಂತು. ಯಾರಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟು ಪ್ರಚಾರ ಮಾಡಿಸಿದ್ದೀರಿ? ದೇವೇಗೌಡರ ಕುಟುಂಬ ಮುಗಿಸಲು ಏನೇನು ಮಾಡಿದ್ರಿ ಎಂಬುದು ನನಗೆ ಗೊತ್ತಿದೆ. ಅದೆಲ್ಲ ಮುಗೀತು ಈಗ ಮುಖ್ಯಮಂತ್ರಿ ಮೇಲೆ ನಡೆತಿದೆ. ಮೂಡಾ 50:50 ನಾನಾ ತಂದಿರೋದು? ಈ ಹುಚ್ಚರೆ ಮುಡಾ ಹಗರಣವನ್ನ ತಂದಿರೋದು ಎಂದು ಡಿಕೆ ಶಿವಕುಮಾರ ಹೆಸರೇಳದೇ ವಾಗ್ದಾಳಿ ನಡೆಸಿದರು.