Thursday, March 30, 2023

Latest Posts

H3N2 influenza ಆತಂಕ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ದಿನೇ ದಿನೇ ಎಚ್3ಎನ್‌2 ಇನ್‌ಫ್ಲೂಯೆಂಜಾ ವೈರಸ್‌ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.ಈ ಹಿನ್ನೆಲೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಜನರಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

ಏನು ಮಾಡಬೇಕು?
ಕೆಮ್ಮುವಾಗ, ಸೀನುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿ ಕೊಳ್ಳಬೇಕು
ಕೈಗಳನ್ನು ಸಾಬೂನಿನಿಂದ ಆಗಾಗ ತೊಳೆದು ಕೊಳ್ಳಬೇಕು
ಕಣ್ಣು ಕಿವಿ ಮೂಗು ಆಗಾಗ ಮುಟ್ಟಿ ಕೊಳ್ಳಬಾರದು
ಫ್ಲ್ಯೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯಿಂದ ಅಂತರ ಕಾಯ್ದು ಕೊಳ್ಳುವಿಕೆ
ಸಾಕಷ್ಟು ನೀರು ಕುಡಿಯುವುದು, ಪೌಷ್ಠಿಕ ಆಹಾರ ಸೇವನೆ ಮಾಡಬೇಕು

ಏನು ಮಾಡಬಾರದು?
ಶೇಕ್ ಹ್ಯಾಂಡ್ ಕೊಡುವುದು, ಹಗ್ ಮಾಡೋದು ಮಾಡಬಾರದು
ರಸ್ತೆಯ, ಸಾರ್ವಜನಿಕ ಪ್ರದೇಶದಲ್ಲಿ ಉಗುಳಬಾರದು
ವೈದ್ಯರ ಸಲಹೆ ಇಲ್ಲದೆ ಔಷಧಿ / ಆಂಟಿಬಯೋಟಿಕ್ ಪಡೆದು ಕೊಳ್ಳಬಾರದು
ಅನಾವಶ್ಯಕವಾಗಿ ಜನ ಸಂದಣಿ ಇರುವ ಪ್ರದೇಶದಲ್ಲಿ ಸೇರಬಾರದು

ಎಕ್ಸ್‌ಬಿಬಿ.1.16 ರೂಪಾಂತರಿ ವೈರಸ್‌ನ 30 ಪ್ರಕರಣಗಳು ಈ ವರ್ಷ ಕರ್ನಾಟಕದಲ್ಲಿ ಪತ್ತೆಯಾಗಿವೆ. ದೇಶಾದ್ಯಂತ ಈ ತಳಿಯ ಒಟ್ಟು 76 ಸೋಂಕು ದೃಢಪಟ್ಟಿದ್ದು, ಅದರಲ್ಲಿ ಕರ್ನಾಟಕದಲ್ಲೇ ಅತಿಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 29, ಪುದುಚೇರಿಯಲ್ಲಿ 7, ದೆಹಲಿಯಲ್ಲಿ 5, ತೆಲಂಗಾಣದಲ್ಲಿ ಎರಡು, ಗುಜರಾತ್‌, ಹಿಮಾಚಲ ಪ್ರದೇಶ ಹಾಗೂ ಒಡಿಶಾದಲ್ಲಿ ತಲಾ 1 ಈ ತಳಿಯ ಪ್ರಕರಣಗಳು ದೃಢಪಟ್ಟಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!