April 8, 2026
Wednesday, April 8, 2026
spot_img

ರೈತರ ಹಬ್ಬದ ಸಂಭ್ರಮ ಕಸಿದ ಆಲಿಕಲ್ಲು ಮಳೆ, ಬೆಳೆ ಹಾನಿಯಿಂದ ಅನ್ನದಾತ ಕಂಗಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜನಗರದಲ್ಲಿ ಭಾರೀ ಮಳೆಯಾಗಿದ್ದು, ಬೆಳೆಗೆ ಹಾನಿಯಾಗಿದೆ. ಇಂದು ಯುಗಾದಿ ಸಂಭ್ರಮದಲ್ಲಿರಬೇಕಿದ್ದ ಅನ್ನದಾತ ಬೆಳೆಯನ್ನು ಕಳೆದುಕೊಂಡು ನೋವಿನಲ್ಲಿದ್ದಾನೆ.

ಚಾಮರಾಜನಗರದ ಅಮಚವಾಡಿ, ಕಡುವಿನಕಟ್ಟೆ ಹುಂಡಿ, ವೀರನಪುರ, ನಂಜೇದೇವನಪುರ ಸೇರಿದಂತೆ ಹಲವು ಭಾಗದಲ್ಲಿ ಅಪಾರ ಬಾಳೆ ನೆಲಕ್ಕೆ ಅಪ್ಪಳಿಸಿದೆ.

ಒಟ್ಟಾರೆ 300 ಕ್ಕೂ ಹೆಚ್ಚು ಪ್ರದೇಶದ ರೈತರಿಗೆ ಬೆಳೆ ನಷ್ಟ ಆಗಿದೆ. ಬಾಳೆ, ಮೆಣಸಿನಕಯಾಯಿ ಹಾಗೂ ಟೊಮ್ಯಾಟೊ ಬೆಳೆಗಳಿಗೆ ಹಾನಿಯಾಗಿದೆ. ಈ ಬಾರಿ ಅನಿರೀಕ್ಷಿತ ಮಳೆಯಿಂದ ನಮಗೆ ನಷ್ಟವಾಗಿದೆ. ನಷ್ಟ ಭರಿಸಿ ಎಂದು ರೈತರು ಆಗ್ರಹಿಸಿದ್ದಾರೆ.

ಆದರೂ ರೈತರ ಮನೆಗಳ ಬಾಗಿಲಿಗೆ ತೋರಣವಿಲ್ಲ, ಅಡುಗೆ ಮನೆಯಲ್ಲಿ ಒಲೆ ಉರಿಯುತ್ತಿಲ್ಲ. ಮನೆಗೆ ನೆಂಟರು ಬಂದಿಲ್ಲ, ಕತ್ತಲಿನ ವಾತಾವರಣದಲ್ಲಿ ದಿನದೂಡುವಂತಾಗಿದೆ..

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !