HAIR CARE | ಬೇಸಿಗೆಯಲ್ಲಿ ಕೂದಲಿಗೆ ಬೇಕು ಸ್ಪೆಷಲ್‌ ಆರೈಕೆ, ಈ ಮಾಸ್ಕ್‌ಗಳನ್ನು ಹಾಕಿ ನೋಡಿ

ಬೇಸಿಗೆಯಲ್ಲಿ ತ್ವಚೆಯಷ್ಟೇ ಕೂದಲಿಗೂ ಆರೈಕೆ ಮಾಡಬೇಕಾಗುತ್ತದೆ. ಬಿಸಿಲಿನ ಝಳಕ್ಕೆ ಕೂದಲು ಜೀವ ಇಲ್ಲದಂತಾಗಿ, ತುದಿಗಳು ಒಡೆಯುತ್ತವೆ. ಬಿಸಿಲಿನ ಕಾಲದಲ್ಲಿ ಕೂದಲ ಆರೈಕೆ ಹೀಗೆ ಮಾಡಿ..

ಜೇನುತುಪ್ಪ-ಆಲೀವ್‌ ಆಯಿಲ್‌ ಮಾಸ್ಕ್‌
ಕಾಲು ಕಪ್ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿ, ನಂತರ ಅದಕ್ಕೆ ಕಾಲು ಕಪ್ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ನೆತ್ತಿಗೆ ಹಚ್ಚಿ. ನಂತರ ಬಿಸಿ ನೀರಿನಲ್ಲಿ ನೆನೆಸಿದ ಟವಲ್‌ನಲ್ಲಿ ಸುತ್ತಿಕೊಳ್ಳಿ. ಅರ್ಧ ಗಂಟೆಯ ನಂತರ, ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

ಮೆಂತ್ಯೆ ಮಾಸ್ಕ್‌
ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ನೆನೆಹಾಕಿ, ನಂತರ ಅದನ್ನು ಮಿಕ್ಸಿಯಲ್ಲಿ ರುಬ್ಬಿ ತಲೆಯ ಬುಡ ಹಾಗೂ ಕೂದಲಿಗೆ ಹಚ್ಚಿ. ಇದು ನಿಮ್ಮ ಕೂದಲನ್ನು ಶೈನಿ ಮಾಡುತ್ತದೆ.

ಮೊಟ್ಟೆ
ಮೊಟ್ಟೆಯ ಬಿಳಿಭಾಗವನ್ನು ಕೂದಲು ಹಾಗೂ ಬುಡಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ವಾಶ್‌ ಮಾಡಿ. ಇಲ್ಲಿ ಹಳದಿ ಭಾಗ ತಾಗಿಸಬೇಡಿ. ಅದು ಕೂದಲಿಗೆ ವಾಸನೆ ನೀಡುತ್ತದೆ.

ನೆಲ್ಲಿಕಾಯಿ
ಕೆಲವು ಆಮ್ಲಾ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ನಯವಾದ ಪೇಸ್ಟ್ ಆಗಿ ಪುಡಿಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ನಿಧಾನವಾಗಿ ಉಜ್ಜಿ. ಬಳಿಕ, ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಪ್ರತಿ ಬಾರಿ ಸ್ನಾನ ಮಾಡುವ ಮೊದಲು ಈ ಸಲಹೆಯನ್ನು ಅನುಸರಿಸುವುದರಿಂದ ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಉದ್ದಿನಬೇಳೆ, ಮೆಂತ್ಯೆ ಮಾಸ್ಕ್‌ 
ಅರ್ಧ ಕಪ್ ಉದ್ದಿನ ಬೇಳೆ ಜೊತೆಗೆ ಒಂದು ಟೀಸ್ಪೂನ್​ ಮೆಂತ್ಯ ಬೀಜಗಳೊಂದಿಗೆ ಬೆರೆಸಿ ನಯವಾಗಿ ಪುಡಿ ಮಾಡಿ. ಈ ಪುಡಿಗೆ ಅರ್ಧ ಕಪ್ ಮೊಸರು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಮೆಂತ್ಯವು ಕೂದಲಿನ ತುದಿಗಳ ಸೀಳುವಿಕೆಯನ್ನು ಕಡಿಮೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!