ದಿನಭವಿಷ್ಯ; ಈ ರಾಶಿಯವರು ಇಂದು ಊಟ ಕಂಟ್ರೋಲ್‌ ಮಾಡ್ಬೇಕು, ಏನೇನೋ ತಿಂದ್ರೆ ಆರೋಗ್ಯಕ್ಕೆ ತೊಂದರೆ!

ಮೇಷ
ನಿಮ್ಮ ಆರೋಗ್ಯದ ಕುರಿತಂತೆ ಎಚ್ಚರಿಕೆ ವಹಿಸಿ. ಕೆಟ್ಟ ಆಹಾರದಿಂದ ಹೊಟ್ಟೆ ಹಾಳು. ಮನೆಯಲ್ಲಿ ನೆಮ್ಮದಿ ಕಲಕುವ ಪ್ರಸಂಗ ಬರಬಹುದು.

ವೃಷಭ
ತೋಚಿದ್ದನ್ನೆಲ್ಲ ಮಾತನಾಡಬೇಡಿ. ಅದರಿಂದ ಇಕ್ಕಟ್ಟಿಗೆ ಸಿಲುಕುವಿರಿ. ಕೆಲವರ ಮನಸ್ತಾಪ ಕಟ್ಟಿಕೊಳ್ಳುವಿರಿ. ವೃತ್ತಿಯಲ್ಲಿ ಅಸಹನೆ.

ಮಿಥುನ
ಸಮಸ್ಯೆಯೊಂದು ನೆಮ್ಮದಿ ಹಾಳು ಮಾಡುವುದು. ಇತರರ ಸಹಕಾರ ಲಭಿಸದೆ ಅಸಹನೆ. ಕೌಟುಂಬಿಕ ಕಲಹ, ಉದ್ವಿಗ್ನತೆ.

ಕಟಕ
ಕಚೇರಿಯಲ್ಲಿ ಜಾಣ್ಮೆ ಯಿಂದ ನಡಕೊಳ್ಳಿ. ಇತರರ ಜಗಳದಲ್ಲಿ ನೀವು ಬಲಿಪಶು ಆಗಬಹುದು.ಕೌಟುಂಬಿಕ ಒತ್ತಡ ಹೆಚ್ಚಳ. ಸಮಚಿತ್ತ ಅವಶ್ಯ.

ಸಿಂಹ
ಬದಲಾದ ಆಹಾರ ಆರೋಗ್ಯದ ಮೇಲೆ ಪರಿಣಾಮ ಬೀರ ಬಹುದು. ಎಚ್ಚರಿಕೆ ತೆಗೆದುಕೊಳ್ಳಿ. ಕರ್ತವ್ಯದಲ್ಲಿ ಉದಾಸೀನತೆ ಒಳಿತಲ್ಲ.

ಕನ್ಯಾ
ಕರ್ತವ್ಯದಲ್ಲಿ ವೈಫಲ್ಯ ಉಂಟಾಗಬಹುದು. ಇದರಿಂದ ಟೀಕೆಗೆ ಗುರಿಯಾಗುವಿರಿ. ಆರೋಗ್ಯದತ್ತ ಗಮನ ಕೊಡಿ. ತಾಳ್ಮೆ ಅವಶ್ಯ.

ತುಲಾ
ಯಾರದೋ ಸಮಸ್ಯೆ ನಿಮ್ಮ ಹೆಗಲೇರಬಹುದು. ಉಳಿದವರ ಚಿಂತೆ ನಿಮ್ಮ ಮೇಲೆ ಎಳೆದುಕೊಳ್ಳುವಿರಿ. ಸಾಧ್ಯವಾದಷ್ಟು ಅದರಿಂದ ದೂರವಿರಿ.

ವೃಶ್ಚಿಕ
ದಿನವಿಡೀ ಆಲಸ್ಯ. ಆರ್ಥಿಕ ವ್ಯವಹಾರದಲ್ಲಿ ಅಂಕಿಅಂಶಗಳತ್ತ ಹೆಚ್ಚು ಗಮನಹರಿಸಿ. ಕಣ್ತಪ್ಪಿದರೆ ಪ್ರಮಾದ ವಾದೀತು.

ಧನು
ನಿಮಗಿಷ್ಟವಾದ ಕಾರ್ಯ ಮಾಡಲು ಹೋಗಿ ವಿವಾದಕ್ಕೆ ಸಿಲುಕುವಿರಿ. ಕೌಟುಂಬಿಕ ಅಸಹಕಾರದಿಂದ ಚಿಂತೆ. ಖರ್ಚು ಅಧಿಕ.

ಮಕರ
ಸಂವಹನದ ಕೊರತೆಯಿಂದ ಆಪ್ತರಲ್ಲಿ ಭಿನ್ನಮತ.ಮಾತುಕತೆಯಿಂದ ಅದನ್ನು ಪರಿಹರಿಸಿ. ಕೌಟುಂಬಿಕ ಅಸಹಕಾರ.

ಕುಂಭ
ನಿಮ್ಮ ಕೆಲಸ ಇತರರಿಗೆ ಪ್ರೇರಣೆ ನೀಡುತ್ತದೆ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಮೆಚ್ಚುಗೆ ಲಭಿಸುವುದು. ಹಣದ ಸಮಸ್ಯೆ ಪರಿಹಾರ.

ಮೀನ
ನಿಮ್ಮ ಸಹನೆ ಕೆಣಕುವ ಪ್ರಸಂಗ ಎದುರಾಗುತ್ತದೆ. ಭಾವನೆ ನಿಯಂತ್ರಿಸುವುದು ಅವಶ್ಯ. ಕೋಪ ತಾಪಕ್ಕೆ ಕಡಿವಾಣ ಹಾಕಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!