ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷ 18 ಲಕ್ಷ ಮಂದಿ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳುವ ಮೂಲಕ ಇಸ್ಲಾಮ್ ಧರ್ಮದ ಪವಿತ್ರ ಸ್ಥಳ ಮೆಕ್ಕಾಗೆ ಅತೀ ಹೆಚ್ಚು ಯಾತ್ರಿಕರು ತೆರಳಿದ ಮೂರನೇ ದೇಶವಾಗಿ ಭಾರತ ಗುರುತಿಸಿಕೊಂಡಿದೆ ಎಂದು ಸೌದಿ ಸರ್ಕಾರ ತಿಳಿಸಿದೆ.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದ್ದು, ಉಳಿದೆರಡು ದೇಶಗಳ ಹೆಸರನ್ನು ಬಹಿರಂಗಗೊಳಿಸಿಲ್ಲ. ಇದರೊಂದಿಗೆ ಯಾತ್ರಿಕರಿಗೆ ಅಲ್ಲಿನ ಸರ್ಕಾರ ನೀಡಿದ ಸೌಲಭ್ಯಗಳ ಕುರಿತೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಮ್ರಾ ಹಾಗೂ ಪ್ರವಾದಿ ಮಸೀದಿಗೆ ಭೇಟಿ ನೀಡುವ ಯಾತ್ರಿಗಳ ಅನುಕೂಲಕ್ಕಾಗಿ ಎಲೆಕ್ಟ್ರಾನಿಕ್ ವೀಸಾ, ಸ್ವಯಂಚಾಲಿತ ಪ್ರವೇಶ ಸೌಲಭ್ಯ ಕಲ್ಪಿಸಲಾಗಿದೆ. ಉಮ್ರಾ ಯಾತ್ರೆ ಕೈಗೊಳ್ಳುವವರಿಗೆ ನೆರವಾಗುವ ಖಾಸಗಿ ಕಂಪನಿಗಳಿಗೆ ತರಬೇತಿ, ಯಾತ್ರಿಗಳ ಸಂಪರ್ಕ ಹೊಂದುವ ಸೌಲಭ್ಯಗಳ ಕುರಿತು ತರಬೇತಿ ಕೂಡಾ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.