ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸದ ಅಧಿಕಾರಿಗಳ ವಿರುದ್ಧ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಗರಂ ಆಗಿದ್ದು, ಇನ್ನು ಮುಂದೆ ಬೆಳಗ್ಗೆ 9:15ರೊಳಗೆ ಸರ್ಕಾರಿ ಕಚೇರಿಯಲ್ಲಿ ಇರದೇ ಹೋದರೆ ಅರ್ಧ ದಿನದ ಸಂಬಳ ಕಟ್ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಗರಿಷ್ಠ 15 ನಿಮಿಷಗಳ ವಿಳಂಬವನ್ನು ಕ್ಷಮಿಸಲು ನಿರ್ಧರಿಸಿದ್ದು, ದೇಶಾದ್ಯಂತ ಕೇಂದ್ರ ಸರ್ಕಾರದ ಉದ್ಯೋಗಿಗಳು ಬೆಳಗ್ಗೆ 9.15ಕ್ಕೆ ಕಚೇರಿಗೆ ಹಾಜರಾಗಿ, ಹಾಜರಾತಿಯನ್ನು ದಾಖಲಿಸಬೇಕು.ಕೇಂದ್ರ ಸರ್ಕಾರಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆ ವರೆಗೆ ತೆರೆದಿರುತ್ತವೆ.
ಆದರೆ ಕಿರಿಯ ಹಂತದ ಉದ್ಯೋಗಿಗಳು ತಡವಾಗಿ ಬರುವುದು ಮತ್ತು ಬೇಗನೆ ಹೊರಡುವುದು ಸಹಜವಾಗಿದೆ. ಇದರಿಂದಾಗಿ ಕೆಲಸಗಳು ಬಾಕಿ ಉಳಿಯುತ್ತಿವೆ. ಈ ಎಲ್ಲ ಕಾರಣದಿಂದ ಅರ್ಧ ದಿನದ ಸಂಬಳ ಕಟ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.