ಕ್ಯಾನ್ಸರ್ ಅನ್ನು ಗೆದ್ದ ನಟಿ ಹಂಸ ನಂದಿನಿ: ಅಭಿಮಾನಿಗಳಿಗೆ ಸಂತಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟಿ ‘ಹಂಸ ನಂದಿನಿ’ 2015 ರಲ್ಲಿ ‘ಒಕ್ಕಟವುಡಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ನಂತರ ನಿರ್ದೇಶಕ ವಂಶಿ ನಿರ್ದೇಶನದ ‘ಅನುಮಾನಾಸ್ಪದಂ’ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಆದರೆ ಈ ನಾಯಕಿಗೆ ಬ್ರೇಕ್ ಕೊಟ್ಟಿದ್ದು ಪ್ರಭಾಸ್ ನಾಯಕನಾಗಿರುವ ‘ಮಿರ್ಚಿ’ ಸಿನಿಮಾ. ಆ ಸಿನಿಮಾದಲ್ಲಿ ‘ಮಿರ್ಚಿ ಮಿರ್ಚಿ’ ಎಂಬ ವಿಶೇಷ ಹಾಡಿನಲ್ಲಿ ಧೂಳೆಬ್ಬಿಸಿದ ಮೇಲೆ ಸಾಲು ಸಾಲು ಆಫರ್ ಗಳು ಬಂದವು.

ಅಲ್ಲಿಂದ ಸ್ಟಾರ್ ಹೀರೋ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್, ಸ್ಪೆಷಲ್ ಅಪಿಯರೆನ್ಸ್ ಕೊಟ್ಟು ರಂಜಿಸತೊಡಗಿದಳು. ಆದರೆ ಗೋಪಿಚಂದ್ ಅಭಿನಯದ ‘ಪಂಥಂ’ ಚಿತ್ರದ ನಂತರ ಈ ನಟಿ ಸಿನಿಮಾಗಳಿಂದ ದೂರ ಉಳಿದಿದ್ದರು. ಹಂಸ ನಂದಿನಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅಭಿಮಾಣಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಮತ್ತೆ ಚಲನಚಿತ್ರಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಕಾಮೆಂಟ್‌ಗಳನ್ನು ಮಾಡಿದ್ದರು.

ಒಂದು ವರ್ಷ ಕ್ಯಾನ್ಸರ್‌ನೊಂದಿಗೆ ಹೋರಾಡಿದ ಹಂಸ ನಂದಿನಿ ಕೊನೆಗೂ ಅದನ್ನು ಮೆಟ್ಟಿ ನಿಂತು ಮತ್ತೆ ಶೂಟಿಂಗ್‌ನಲ್ಲಿ ಪಾಲ್ಗೊಂಡರು. ಸೆಟ್‌ನಿಂದ ದೃಶ್ಯಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.. “ನಾನು ನನ್ನ ಸಹ-ನಟರನ್ನು ಮತ್ತು ಸಿನಿಮಾ ಜಗತ್ತನ್ನು ತುಂಬಾ ತುಂಬಾ ಮಿಸ್‌ ಮಾಡಿಕೊಂಡಿದ್ದೆ. ಈಗ ಮತ್ತೆ ಸಿನಿಮಾ ಸೆಟ್‌ಗೆ ಕಾಲಿಡುವುದು ಪುನರ್ಜನ್ಮದಂತೆ ಭಾಸವಾಗಿದೆ” ಎಂದು ಭಾವುಕರಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!