ಕೋವಿಡ್‌ ಗೆ ತುತ್ತಾಗಿ ಜೆಕ್‌ ಗಣರಾಜ್ಯದ ಜಾನಪದ ಗಾಯಕಿ ಹನ ಹೋರ್ಕ್‌ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಲಸಿಕೆ ಪಡೆಯದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಜೆಕ್‌ ಗಣರಾಜ್ಯದ ಖ್ಯಾತ ಜಾನಪದ ಗಾಯಕಿ ಹನ ಹೋರ್ಕ್‌ (57) ನಿಧನರಾಗಿದ್ದಾರೆ.
ಈ ಬಗ್ಗೆ ಹನ ಹೋರ್ಕ್‌ ರ ಮಗ ರೆಕ್ ಮಾಹಿತಿ ನೀಡಿದ್ದು, ನನಗೆ ಮತ್ತು ನನ್ನ ತಂದೆಗೆ ಕೋವಿಡ್‌ ದೃಢಪಟ್ಟಿತ್ತು. ಕೆಲ ಸ್ಥಳಗಳಿಗೆ ಭೇಟಿ ನೀಡಲು ಪಾಸ್‌ ಸಿಗುತ್ತದೆ ಎಂದು ನನ್ನ ತಾಯಿ ಬೇಕೆಂದಲೇ ಸೋಂಕು ತಗುಲಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಸೋಂಕು ದೃಢಪಟ್ಟನಂತರ ಐಸೊಲೇಟ್‌ ಆಗಿದ್ದರು. ವೈದ್ಯರ ಸಲಹೆಯಂತೆ ಹನ ಹೋರ್ಕ್‌ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ರೆಕ್‌ ಹೇಳಿದ್ದಾರೆ.
ಹಳೆಯ ಜಾನಪದ ಗಾಯನ ತಂಡ ಅಸೋನಾನ್ಸ್‌ ನ ಸದಸ್ಯೆಯಾಗಿದ್ದ ಹನಾ, ಕೋವಿಡ್‌ ನಿಂತ ಚೇತರಿಸಿಕೊಂಡರೆ ಇತರ ಸಾರ್ವಜನಿಕ ಸ್ಥಳಗಳಿಗೆ ಸುಲಭ ಪ್ರವೇಶ ಸಿಗಲಿದೆ ಎನ್ನುವ ಕಾರಣಕ್ಕೆ ಸೋಂಕು ತಗುಲಿಸಿಕೊಂಡಿದ್ದರು. ಆದರೆ ಪುತ್ರ ರೆಕ್‌ ಹಾಗೂ ಹನಾ ಅವರ ಪತಿ ಲಸಿಕೆ ಪಡೆದಿದ್ದರೂ. ಆದರೂ ಕ್ರಿಸ್ ಮಸ್‌ ಸಮಯದಲ್ಲಿ ಕೋವಿಡ್‌ ಗೆ ತುತ್ತಾಗಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!