ಹೊಸದಿಗಂತ ವರದಿ ಹಾನಗಲ್ಲ :
ತಾಲೂಕಿನ ನಾಲ್ಕರ ಕ್ರಾಸ್ ಬಳಿ ನೈತಿಕ ಪೊಲೀಸಗಿರಿ ನಂತರ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ಸ್ಥಳಕ್ಕೆ ಶನಿವಾರ ದಾವಣಗೆರೆಯ ಪೂರ್ವ ವಲಯದ ಐಜಿಪಿ ಡಾ.ಕೆ.ತ್ಯಾಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಹಾನಗಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಘಟನೆ ಕುರಿತು ಸಮಗ್ರ ಮಾಹಿತಿ ಪಡಡದುಕೊಂಡು ಎಲ್ಲಾ ಆಯಾಮದ ತನಿಖೆ ಕುರಿತು ಸೂಚನೆ ನೀಡಿದರು ಎನ್ನಲಾಗಿದೆ.
ಈ ವೇಳೆ ಹಾವೇರಿ ಜಿಲ್ಲಾ ಎಸ್‌ಪಿ ಅಂಶುಕುಮಾರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.