Sunday, December 3, 2023

Latest Posts

ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ: ಪೊಲೀಸರಿಂದ ವ್ಯಕ್ತಿಯ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುರುವಾರ ಉಡುಪಿ ನಗರ ಠಾಣೆಯ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದ ಪೊಲೀಸರ ತಂಡದ ಸಮಯಪ್ರಜ್ಞೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಘಟನೆ ನಡೆದಿದೆ.

ಉಡುಪಿಯ ಮೂಡನಿಡಂಬೂರು ಎಲ್.ಐ.ಸಿ ಕಾಲೋನಿ ನಿವಾಸಿ ರೋಹನ್‌ ರಾಜೇಶ ಜತ್ತನ್ನ (42) ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಘಟನೆಯ ಹಿನ್ನಲೆ

ಕೌಟಂಬಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ ರೋಹನ್‌ ರಾಜೇಶ್‌ ಜತ್ತನ್ನ ಉಡುಪಿ ನಗರದ ಖಾಸಗಿ ಲಾಡ್ಜ್‌ ನಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಬಳಿಕ ಆತ ತನ್ನ ಮಂಗಳೂರಿನ ಸ್ನೇಹಿತ ಆದಿತ್ಯ ಎಂಬಾತನಿಗೆ ಕರೆ ಮಾಡಿದ್ದು, ಆದಿತ್ಯ ಕೂಡಲೇ ಮಂಗಳೂರು ಪೊಲೀಸ್‌ ಕಂಟ್ರೋಲ್‌ ರೂಮಿಗೆ ಮಾಹಿತಿ ನೀಡಿದ್ದರು.

ಮಂಗಳೂರು ಪೋಲಿಸ್‌ ಕಂಟ್ರೋಲ್‌ ರೂಮಿನಿಂದ ಉಡುಪಿ ಪೊಲೀಸರಿಗೆ ಮಾಹಿತಿ ಬಂದಿದ್ದು ಕೂಡಲೇ ಉಡುಪಿ ನಗರಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಖಾಸಗಿ ಲಾಡ್ಜಿಗೆ ದೌಡಿಯಿಸಿದ ಪೊಲೀಸರು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಹನ್‌ ಅವರನ್ನು ಆಸ್ಪತ್ರೆಗೆ ಕೊಂಡೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ರೋಹನ್ ಅಪಾಯದಿಂದ ಪಾರಾಗಿದ್ದಾನೆ.

ಉಡುಪಿ ನಗರ ಠಾಣೆಯ ಎಸ್.ಐ ಪ್ರಸಾದ್ ಕಲ್ಲಹಳ್ಳಿ, ಸಿಬ್ಬಂದಿಗಳಾದ ಚೇತನ್, ಮಹಾಂತೇಶ್, ಹೇಮಂತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!