ಹೊಸದಿಗಂತ ವರದಿ,ಯಲ್ಲಾಪುರ:
ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯಿತ್ತಿದ್ದು, ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗುಳ್ಳಾಪುರ ಸಮೀಪದ ಹಳವಳ್ಳಿಯಲ್ಲಿ ಜನರನ್ನು ಸಾಗಿಸುತ್ತಿದ್ದ ದೋಣಿಯು ತಾಂತ್ರಿಕ ಕಾರಣದಿಂದ ನದಿ ಮಧ್ಯ ಕೆಟ್ಟು ನಿಂತ ಘಟನೆ ಬುಧವಾರ ಸಂಜೆ ನಡೆದಿದೆ.
ನೇರೆ ಭೀತಿ ಉಂಟಾದ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದು, ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಗುಳ್ಳಾಪುರ ಹಳವಳ್ಳಿಯನ್ನು ಸಂಪರ್ಕಿಸುತ್ತಿದ್ದ ಸೇತುವೆ ಕುಸಿದು ಹೋಗಿ ನಡುಗಡ್ಡೆಯಂತಾಗಿತ್ತು. ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಸಹ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ರಣ ಮಳೆಗೆ ಮುಳುಗಿ ಹೋಗಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ದೋಣಿ ವ್ಯವಸ್ಥೆಯನ್ನು ಸಹ ನಿಲ್ಲಿಸಲಾಗಿತ್ತು. ಇದೀಗ ನೆರೆ ಸನ್ನಿವೇಶ ಉಂಟಾದ ಹಿನ್ನೆಲೆಯಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದ ಬೋಟ್ ತಾಂತ್ರಿಕ ಕಾರಣಗಳಿಂದ ನಡು ಮಧ್ಯದಲ್ಲೆ ಸಿಲುಕಿದ್ದರಿಂದ ಜನರು ಭಯಭೀತರಾಗಿದ್ದಾರೆ. ಬೋಟ್‌ನಲ್ಲಿ 5 ಜನರಿದ್ದು, ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.