ಹೊಸ ದಿಗಂತ ವರದಿ, ಚಿತ್ರದುರ್ಗ:
ಚಿತ್ರದುರ್ಗ ನಗರದ ವಾಸವಿ ಮಹಲ್‌ನಲ್ಲಿ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ಭಾರತ ಸರ್ಕಾರ, ಜವಳಿ ಅಭಿವೃದ್ಧಿ ಆಯುಕ್ತರು, ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಸರ್ಕಾರ, ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ಹ್ಯಾಂಡ್‌ಲೂಮ್ಸ್ ಬೆಂಗಳೂರು, ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ವಸ್ತ್ರಾಂಜಲಿ-2022ರ ಜಿಲ್ಲಾ ಕೈಮಗ್ಗ ಮೇಳ ಹಾಗೂ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.
ವಸ್ತ್ರಾಂಜಲಿ-2022 ಹೆಸರಿನಲ್ಲಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಕೈಮಗ್ಗ ನೇಕಾರ ಸಹಕಾರ ಸಂಘಗಳ ನೇಕಾರರಿಂದ ಉತ್ಪಾದಿಸಲ್ಪಟ್ಟ ವಸ್ತುಗಳ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ಭಾರತ ಸರ್ಕಾರದ ಸಹಯೋಗದೊಂದಿಗೆ ಈ ಮೇಳವನ್ನು ಆಯೋಜಿಸಲಾಗಿದೆ.
ಮೇಳದಲ್ಲಿ ಜಿಲ್ಲೆಯ ಪ್ರಖ್ಯಾತ ಮೊಳಕಾಲ್ಕೂರು ಅಪ್ಪಟ ರೇಷ್ಮೆ ಸೀರೆಗಳು, ಚಳ್ಳಕೆರೆಯ ವಿವಿಧ ನಮೂನೆಯ ಉಣ್ಣೆ ಕಂಬಳಿಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿ ತಯಾರಾಗುತ್ತಿರುವ ಹತ್ತಿ ಕೈಮಗ್ಗ ಉತ್ಪನ್ನಗಳಾದ, ಲುಂಗಿಗಳು, ಬೆಡ್‌ಶೀಟ್, ಶಟಿಂಗ್‌ಗಳು, ಕೈವಸ್ತ್ರ, ಟವಲ್, ಇಳಕಲ್ ಸೀರೆಗಳು ಸೇರಿದಂತೆ ಇತ್ಯಾದಿ ಕೈಮಗ್ಗ ಉತ್ಪನ್ನಗಳನ್ನು ಅಧಿಕಾರಿಗಳು ವೀಕ್ಷಣೆ ಮಾಡಿದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ಮನಮೋಹಕ ಮತ್ತು ಆಕ?ಕ ಬಣ್ಣಗಳಿಂದ ಕೂಡಿದ ವೈವಿಧ್ಯಮಯ ಹೊಸ ಹೊಸ ವಿನ್ಯಾಸಗಳುಳ್ಳ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು, ಕರ್ನಾಟಕದ ಪರಂಪರಾಗತವಾದ ರಮಣೀಯ ಮೊಳಕಾಲ್ಮೂರಿನ ಅಪ್ಪಟ ರೇಷ್ಮೆ ಸೀರೆಗಳು, ಉತ್ತರ ಕರ್ನಾಟಕದ ಇಳಕಲ್ ಸೀರೆಗಳು, ಡ್ರೆಸ್ ಮೆಟಿರೀಯಲ್, ಉಣ್ಣೆ ಕಂಬಳಿಗಳು ಪೂಜಾ ಕಂಬಳಿಗಳು, ಶಾಲುಗಳು, ಹತ್ತಿ ಬೆಡ್ ಶೀಟ್‌ಗಳು, ಶರ್ಟ್, ಲುಂಗಿಗಳು, ಟವಲ್‌ಗಳು, ಕರವಸ್ತ್ರಗಳು ಮತ್ತು ಕಾಟನ್ ಸೀರೆಗಳು ಗ್ರಾಹಕರ ಕಣ್ಮನ ಸೆಳೆದವು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್, ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ನಂದಿನಿದೇವಿ, ಕಾವೇರಿ ಹ್ಯಾಂಡ್ ಲೂಮ್ಸ್ ವ್ಯವಸ್ಥಾಪಕ ನಿರ್ದೇಶಕ ಮುದ್ದಯ್ಯ, ತುಮಕೂರು ಪೂರ್ವ ವಲಯದ ಕೈಮಗ್ಗ ಮತ್ತು ಜವಳಿ ಜಂಟಿ ನಿರ್ದೇಶಕ ಶ್ರೀಧರ್ ನಾಯಕ್, ಚಿತ್ರದುರ್ಗ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ತಿಪ್ಪೇಸ್ವಾಮಿ, ಚಿತ್ರದುರ್ಗ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಶಿವರಾಜ್ ಆರ್. ಕುಲಕರ್ಣಿ, ಚಿತ್ರದುರ್ಗ ಖಾದಿ ಮಹಾಮಂಡಲದ ಅಧ್ಯಕ್ಷ ಜಯರಾಮ್, ಮೊಳಕಾಲ್ಮೂರು ರೇಷ್ಮೆ ಸಂಘದ ಅಧ್ಯಕ್ಷ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ