ಉಕ್ರೇನ್ ನಲ್ಲಿ ಸಿಲುಕಿದ ವಿಜಯಪುರದ ವಿದ್ಯಾರ್ಥಿನಿ ಸುಚಿತ್ರಾ; ಪಾಲಕರಲ್ಲಿ ಆತಂಕ

ಹೊಸ ದಿಗಂತ ವರದಿ, ವಿಜಯಪುರ:

ನಗರದ ವಿದ್ಯಾರ್ಥಿನಿಯೊಬ್ಬಳು ಉಕ್ರೇನ್ ನಲ್ಲಿ ಸಿಲುಕಿದ್ದು, ಉಕ್ರೇನ್- ರಷ್ಯಾ ಮಧ್ಯೆ ಯುದ್ಧ ನಡೆಯುತ್ತಿರುವ ಹಿನ್ನೆಲೆ ವಿದ್ಯಾರ್ಥಿನಿ ಪಾಲಕರು ತೀವ್ರ ಆತಂಕಕ್ಕೀಡಾಗಿದ್ದಾರೆ.
ಇಲ್ಲಿನ ಗುರುಪಾದೇಶ್ವರ ನಗರದ ವಿದ್ಯಾರ್ಥಿನಿ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಉಕ್ರೇನ್ ನಲ್ಲಿ ಸಿಲುಕಿದ್ದು,
ಎಂಬಿಬಿಎಸ್ ವ್ಯಾಸಾಂಗಕ್ಕಾಗಿ, ಕಳೆದ ಒಂದೂವರೆ ವರ್ಷದಿಂದ ಉಕ್ರೇನ್ ನಲ್ಲಿ ವಾಸವಿದ್ದರು.

ವಿದ್ಯಾರ್ಥಿನಿ ಪಾಲಕರು ಮೂಲತಃ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದವರಾಗಿದ್ದು,
ಸದ್ಯ ವಿಜಯಪುರ ನಗರದಲ್ಲಿ ವಾಸವಿದ್ದಾರೆ.
ಸುಚಿತ್ರಾ ತಂದೆ ಮಲ್ಲನಗೌಡ ಕವಡಿಮಟ್ಟಿ ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿದ್ದು, ತಾಯಿ ಕಮಲಾ ಕವಡಿಮಟ್ಟಿ ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಸುಚಿತ್ರಾ ಹಿರಿಯ ಮಗಳು, ಕಿರಿಯ ಪುತ್ರ ಅಭಿಷೇಕ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ.
ಉಕ್ರೇನ್ ರಷ್ಯಾ ಮಧ್ಯೆ ನಡೆಯುತ್ತಿರೋ ಯುದ್ಧಿದಿಂದ ಮನೆಯಲ್ಲಿ ಆತಂಕ ಮೂಡಿದ್ದು, ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಪಾಲಕರು ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!