Monday, October 2, 2023

Latest Posts

ಎಕೆಪಿಎ ಸಾಂತ್ವನ ಯೋಜನೆಯ ಫಲಾನುಭವಿ ಕುಟುಂಬಕ್ಕೆ ಧನಸಹಾಯ ಹಸ್ತಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಲ್ ಕೇರಳ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಮಾಧವನ್ ಹರಿತ ಸಂಸ್ಮರಣೆ ಹಾಗೂ ಸಾಂತ್ವನ ಕುಟುಂಬ ಸಹಾಯ ನಿಧಿ ವಿತರಣೆ ಕಾರ್ಯಕ್ರಮ ಕಾಞಂಗಾಡು ಜೆಸಿಐ ಸಭಾಂಗಣದಲ್ಲಿ ಬುಧವಾರ ನಡೆಯಿತು. ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿದರು.

ಪಕ್ಷ ರಾಜಕೀಯಾತೀತವಾಗಿರುವ ಎಕೆಪಿಎ ಸಂಘಟನೆ ಎಲ್ಲರಿಗೂ ನೆರವಾಗುವ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಎಲ್ಲಾ ವಿಚಾರಕ್ಕೂ ಸರ್ಕಾರವನ್ನೇ ಅವಲಂಬಿಸುವ ಹಾದಿಯಿಂದ ದೂರಸರಿದು ತಮ್ಮದೇ ಆದ ಸ್ವಸಹಾಯ ಯೋಜನೆಯನ್ನು ಅಭಿವೃದ್ಧಿಪಡಿಸಿ ರಾಜ್ಯದ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.

ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾಧ್ಯಕ್ಷ ಅಹ್ಮದ್ ಶರೀಫ್ ಮಾತನಾಡಿದರು. ಎಕೆಪಿಎ ರಾಜ್ಯ ಸಾಂತ್ವನ ಸಮಿತಿ ಚೇರ್‌ಮೇನ್ ಗಿರೀಶ್ ಪಟ್ಟಾಂಬಿ ಸಾಂತ್ವನ ಯೋಜನೆಯನ್ನು ವಿವರಿಸಿದರು. ಎಕೆಪಿಎ ಜಿಲ್ಲಾಧ್ಯಕ್ಷ ಕೆ. ಸಿ. ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಉಣ್ಣಿ ಕೂವೊಡ್, ಹರೀಶ್ ಪಾಲಕುನ್ನು, ಎನ್.ಎ.ಭರತನ್, ವೇಣು ವಿವಿ, ಶರೀಫ್ ಫ್ರೇಮ್ ಆರ್ಟ್, ವಿಜಯನ್ ಶೃಂಗಾರ್, ಪ್ರಶಾಂತ್ ತೈಕ್ಕಡಪ್ಪುರಂ, ಸಂಜೀವರೈ, ಮಹಮ್ಮದ್ ಕುಂಞಿ, ಎ.ವಾಸು, ಸಂತೋಷ್ ಫೋಟೋ ಮ್ಯಾಕ್ಸ್, ಸುರೇಶ್ ಆಚಾರ್ಯ, ಅಶೋಕನ್ ಪೊಯಿನಾಚಿ, ದಿನೇಶ್ ಇನ್‌ಸೈಟ್, ಸುಕು ಸ್ಮಾರ್ಟ್ ಮತ್ತಿತರರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯಾ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸುಧೀರ್ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!