ಹನ್ಸಿಕಾ ಮೊಟ್ವಾನಿ ಭಾವಿ ಪತಿಗೆ ಈಗಾಗಲೇ ಮದುವೆ ಆಗಿದ್ಯಂತೆ? ಅದೂ ಹನ್ಸಿಕಾ ಸ್ನೇಹಿತೆ ಜೊತೆ!?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆ್ಯಪಲ್ ಬ್ಯೂಟಿ ಹನ್ಸಿಕಾ ಇತ್ತೀಚೆಗಷ್ಟೇ ತಾನು ಮದುವೆಯಾಗಲಿರುವ ಭಾವೀ ಪತಿ ಬಗ್ಗೆ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದರು. ಐಫೆಲ್ ಟವರ್‌ ಬಳಿ ತನ್ನ ಗೆಳೆಯನ ಜೊತೆಗಿರುವ ಫೋಟೋಗಳನ್ನು ಹನ್ಸಿಕಾ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಇದೀಗ ಹನ್ಸಿಕಾ ಪತಿಗೆ ಈಗಾಗಲೇ ಮದುವೆಯಾಗಿದೆ ಎಂಬ ಗಾಸಿಪ್‌ ಓಟಾಡುತ್ತಿದೆ. ಅದೂ, ಹನ್ಸಿಕಾ ಸ್ನೇಹಿತೆಯ ಜೊತೆಯಂತೆ ಮೊದಲ ಪತ್ನಿ ಜೊತೆಗೆ ವಿಚ್ಛೇದನವಾದ್ದರಿಂದ ಇದೀಗ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2016 ರಲ್ಲಿಯೇ ಹನ್ಸಿಕಾ ಅವರನ್ನು ಮದುವೆಯಾಗಲಿರುವ ಸೋಹೆಲ್‌ಗೆ ರಿಂಕಿ ಎಂಬ ಹುಡುಗಿಯೊಂದಿಗೆ ವಿವಾಹವಾದರು. ಯೂಟ್ಯೂಬ್‌ನಲ್ಲಿ ಅವರ ಮದುವೆಯ ವಿಡಿಯೋ ಕೂಡ ಇದೆ. ರಿಂಕಿ ಹಾಗೂ ಸೋಹೆಲ್ ಕೂಡ ಹನ್ಸಿಕಾಗೆ ಕ್ಲೋಸ್‌ ಫ್ರೆಂಡ್ಸ್‌.

ರಿಂಕಿ ಮತ್ತು ಸೋಹೆಲ್ ಬೇರ್ಪಟ್ಟ ನಂತರ ಸೋಹೆಲ್ ಹನ್ಸಿಕಾಗೆ ಹತ್ತಿರವಾಗಿ, ಮದುವೆಯಾಗಲು ಹೊರಟಿದ್ದಾರೆ ಎಂದು ವರದಿಯಾಗಿದೆ. ಇದು ನಿಜವೇ ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಹನ್ಸಿಕಾಗೆ ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಹನ್ಸಿಕಾರಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!