September 21, 2026
Monday, September 21, 2026
spot_img

7ನೇ ವಾರದಲ್ಲೂ ‘ಹನುಮಾನ್ ಅಂಶ್’ ಅಬ್ಬರ: ಕಾಂತಾರ, ಧುರಂಧರ್ ದಾಖಲೆ ಧೂಳೀಪಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಈಗ ‘ಹನುಮಾನ್ ಅಂಶ’ ಸಿನಿಮಾದ್ದೇ ಹವಾ. ರಿಲೀಸ್ ಆಗಿ ಏಳು ವಾರಗಳಾಗುತ್ತಾ ಬಂದರೂ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ ಮಾತ್ರ ಕಮ್ಮಿ ಆಗ್ತಿಲ್ಲ. 7ನೇ ವೀಕೆಂಡ್‌ನಲ್ಲೂ ಈ ಸಿನಿಮಾ ಮಾಡಿರೋ ಕಲೆಕ್ಷನ್ ನೋಡಿ ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರಿನೇ ಶಾಕ್ ಆಗಿದೆ.

ಏಳನೇ ವೀಕೆಂಡ್‌ನಲ್ಲಿ ‘ಹನುಮಾನ್ ಅಂಶ್’ ಬರೋಬ್ಬರಿ 27.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಚಾರ್ಟ್‌ನಲ್ಲಿ ಧೂಳೆಬ್ಬಿಸಿದೆ. ಶುಕ್ರವಾರ ಮತ್ತು ಶನಿವಾರ ಸೂಪರ್ ಕಲೆಕ್ಷನ್ ಮಾಡಿದ್ದ ಸಿನಿಮಾ, ಭಾನುವಾರ ಬರುವಷ್ಟರಲ್ಲಿ ಬಿಸಿನೆಸ್‌ನಲ್ಲಿ ಶೇಕಡಾ 40 ರಷ್ಟು ಭಾರಿ ಏರಿಕೆ ಕಂಡು ಒಂದೇ ದಿನ 13.25 ಕೋಟಿ ರೂಪಾಯಿ ಬಾಚಿಕೊಂಡಿದೆ. ಭಾನುವಾರ ಬಂದ ಈ ಒಂದೇ ದಿನದ ಕಲೆಕ್ಷನ್, ಹಿಂದೆ ‘ಧುರಂಧರ್’ ಸಿನಿಮಾ 7ನೇ ವಾರದಲ್ಲಿ ಮಾಡಿದ್ದ ಒಟ್ಟು 11.75 ಕೋಟಿ ರೂ. ದಾಖಲೆಯನ್ನೇ ಉಡೀಸ್ ಮಾಡಿದೆ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ 7ನೇ ವಾರದಲ್ಲಿ ‘ಕಾಂತಾರ’ ಮಾಡಿದ್ದ 20 ಕೋಟಿ ನೆಟ್ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿ ಈಗ ಆಲ್ ಟೈಮ್ ನ್ಯಾಷನಲ್ ರೆಕಾರ್ಡ್ ಬರೆದಿದೆ.

ಈಗಾಗಲೇ ಸಾಲು ಸಾಲು ರೆಕಾರ್ಡ್‌ಗಳನ್ನು ತನ್ನ ಹೆಸರಿಗೆ ಬರೆದುಕೊಂಡಿರೋ ಈ ಸಿನಿಮಾ, ಪ್ರತಿಯೊಂದು ವಾರವೂ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುತ್ತಾ ಸಾಗಿದೆ. ಸಿನಿಮಾ ಓಡ್ತಿರೋ ಜೋರು ನೋಡಿದ್ರೆ 10ನೇ ವಾರದವರೆಗೂ ಇದೇ ರೀತಿ ರೆಕಾರ್ಡ್‌ಗಳನ್ನು ತನ್ನ ಖಾತೆಗೆ ಹಾಕಿಕೊಳ್ಳುವುದು ಆಲ್ಮೋಸ್ಟ್ ಕನ್ಫರ್ಮ್ ಆಗಿದೆ.

ಸದ್ಯಕ್ಕೆ 45 ದಿನಗಳ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಬರೋಬ್ಬರಿ 259.25 ಕೋಟಿ ರೂಪಾಯಿ ತಲುಪಿದೆ. ಈ ವಾರದ ಕೊನೆಗೆ ಸುಲಭವಾಗಿ 275 ಕೋಟಿ ಗಡಿ ದಾಟಲಿದ್ದು, ಅಲ್ಲಿಂದ 300 ಕೋಟಿ ಕ್ಲಬ್ ಸೇರೋದು ಗ್ಯಾರಂಟಿ ಎನ್ನಲಾಗುತ್ತಿದೆ. ಹಾಕಿದ ಬಂಡವಾಳಕ್ಕೆ ಕೊಟ್ಯಂತರ ರೂಪಾಯಿ ಲಾಭ ತಂದುಕೊಟ್ಟಿರೋ ‘ಹನುಮಾನ್ ಅಂಶ್’ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ROI (ರಿಟರ್ನ್ ಆಫ್ ಇನ್ವೆಸ್ಟ್ಮೆಂಟ್) ತಂದುಕೊಟ್ಟ ಸೂಪರ್ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !