ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಸೀಸನ್ 11 ವಿನ್ನರ್ ಹನುಮಂತುಗೆ ತವರಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.ಇಡೀ ಸವಣೂರು ಪಟ್ಟಣ ಕುಣಿದು ಕುಪ್ಪಳಿಸಿದೆ.
ಸವಣೂರು ಪಟ್ಟಣಕ್ಕೆ ಬಂದ ಹನುಮಂತುಗೆ ಡಿಜೆ ಹಾಕಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಹನುಮಂತು ಬಿಗ್ ಬಾಸ್ ವಿನ್ನರ್ ಕಪ್ ಹಿಡಿದು ಮೆರವಣಿಗೆ ನಡೆಸಿದ್ದಾನೆ.ಸುಮಾರು 10 ಕಿಲೋಮೀಟರ್ ವರೆಗೆ ತೆರದ ವಾಹನ ಮೆರವಣಿಗೆ ಸಾಗಿತು. ಹನುಮಂತನ ಫ್ಯಾನ್ಸ್, ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹನುಮಂತು ಜನರತ್ತ ಕೈ ಬಿಸಿ, ಕೈ ಮುಗಿದು ಧನ್ಯವಾದ ತಿಳಿಸಿದ್ರೆ ಜನರು ಸೆಲ್ಪಿಗೆ ಮುಗಿ ಬಿದ್ದಿದ್ದಾರೆ.ತನ್ನನ್ನು ಗೌರವಿಸಿ ಅದ್ದೂರಿ ಮೆರವಣಿಗೆ ಮಾಡಿದ ಊರಿನವರಿಗೆ ಕೃತಜ್ಞತೆ ಸಲ್ಲಿಸಿದರು.