ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆಯ ರಾಜ್ಯಗಳ ಮದ್ಯ ಮಾರಾಟ ದರವನ್ನು ಪರಿಗಣಿಸಿ ರಾಜ್ಯದಲ್ಲೂ ದುಬಾರಿ ಮದ್ಯವನ್ನು ಅಗ್ಗದ ದರದಲ್ಲಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಅಬಕಾರಿ ಆದಾಯ ಹೆಚ್ಚಿಸಲು ಮದ್ಯದ ದರ ಇಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಇದರಿಂದಾಗಿ ಶೀಘ್ರದಲ್ಲೇ ಮದ್ಯ ದರ ಇಳಿಕೆಯಾಗುವ ಸಾಧ್ಯತೆ ಇದೆ.
ನೆರೆಹೊರೆಯ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿ ಮದ್ಯದ ದರ ಹೆಚ್ಚಿದೆ. ಹೀಗಾಗಿ ಗಡಿಭಾಗದ ಜನ ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂ. ಹಣ ನಷ್ಟವಾಗುತ್ತಿತ್ತು. ಈ ನಷ್ಟವನ್ನು ತಪ್ಪಿಸಲು ಮದ್ಯ ದರ ಇಳಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಮದ್ಯಪ್ರಿಯರಿಗೆ ಶೀಘ್ರದಲ್ಲೇ ಖುಷಿ ವಿಷ್ಯ ಸಿಗಲಿದ್ಯಾ ಇಲ್ವಾ ಕಾದುನೋಡಬೇಕಿದೆ..