ಐಸ್ ಕ್ರೀಮ್ ಬೇಡ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಯಾವುದೇ ಸಮಯದಲ್ಲಿ ಐಸ್ ಕ್ರೀಮ್ ಅನ್ನು ಆನಂದಿಸಲು ಇಷ್ಟಪಡುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ ಐಸ್ ಕ್ರೀಮ್ ಸೇವಿಸುವುದು ನೀವು ಮಾಡಬಹುದಾದ ಉತ್ತಮ ಕೆಲಸ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇದು ನಿಮ್ಮ ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಜೊತೆಗೆ, ನೀವು ದಿನವಿಡೀ ಖುಷಿಯಿಂದ ಕೆಲಸ ಮಾಡಬಹುದು. ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಐಸ್ ಕ್ರೀಂ ತಿನ್ನಿಸಿ ನಂತರ ಅವರಿಗೆಲ್ಲ ಒಗಟು ಬಿಡಿಸುವಂತೆ ಸೂಚಿಸಲಾಯ್ತು.
ಬೆಳಗ್ಗೆ ಐಸ್ ಕ್ರೀಂ ತಿಂದವರೆಲ್ಲ ಬಹಳ ಎಚ್ಚರವಾಗಿ ಒಗಟುಗಳನ್ನು ಜಾಣತನದಿಂದ ಬಿಡಿಸುತ್ತಿದ್ದರು. ಅವರ ನಡುವೆ ಯಾವುದೇ ಭಾವನಾತ್ಮಕ ಪ್ರಚೋದನೆ ಇರಲಿಲ್ಲ. ಆದ್ರೆ ನ್ಯೂಟ್ರಿಶಿಯನ್ ಗಳು ಮಾತ್ರ ಬೆಳ್ಳಂಬೆಳಗ್ಗೆ ಜಾಸ್ತಿ ಕ್ಯಾಲೋರಿ ಇರೋ ಐಸ್ ಕ್ರೀಂ ತಿನ್ನಬೇಡಿ, ಹಣ್ಣು, ಕಡಿಮೆ ಕ್ಯಾಲೋರಿ ಇರೋ ತಿನಿಸನ್ನು ಸೇವಿಸಿ ಎನ್ನುತ್ತಾರೆ.