ಹರ್​ ಘರ್ ತಿರಂಗ: ಅಂಚೆ ಮೂಲಕ ಮನೆಗೆ ಬರಲಿದೆ ರಾಷ್ಟ್ರಧ್ವಜ, ಹೇಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನ ಕೈಗೊಂಡಿರುವ ಕೇಂದ್ರ ಸರ್ಕಾರ ಜನರಿಗೆತ್ರಿವರ್ಣ ಧ್ವಜ ದೊರಕಲು ನಾನಾ ವ್ಯವಸ್ಥೆಗಳನ್ನು ಕೈಗೊಂಡಿದೆ.

ರಾಷ್ಟ್ರಧ್ವಜ ಹಾರಿಸಲು ಬಯಸುವವರು ಭಾರತೀಯ ಅಂಚೆ ಇಲಾಖೆ ಮೂಲಕ ಧ್ವಜವನ್ನು ಮನೆಗೇ ತರಿಸಿಕೊಳ್ಳಬಹುದು. ಡೆಲಿವರಿಗೆಂದು ಯಾವುದೇ ಶುಲ್ಕ ಪಡೆಯದೇ ಧ್ವಜವನ್ನು ಅಂಚೆ ಇಲಾಖೆ ತಲುಪಿಸಲಿದೆ.

ಅಂಚೆ ಮೂಲಕ ರಾಷ್ಟ್ರಧ್ವಜ ಪಡೆಯಲು ಇಚ್ಛಿಸುವವರು ಇ-ಪೋಸ್ಟ್ ಮೂಲಕ 25 ರೂ. ಪಾವತಿಸಿದರೆ ಸಾಕು. ಆಗಸ್ಟ್​ 12ರ ಮಧ್ಯರಾತ್ರಿ 12 ಗಂಟೆಯವರೆಗೂ ಬುಕಿಂಗ್​ಗೆ ಅವಕಾಶ ಇರಲಿದೆ.

https://www.epostoffice.gov.in/

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!