ಹಿಮಾಲಯ ಪರ್ವತಶ್ರೇಣಿಗಳ ನಡುವೆ ಈಗ ಮತ್ತೆ ಅನುರಣಿಸುತ್ತಿದೆ ’ಹರ ಹರ ಮಹಾದೇವ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಕ್ತರ ಭೇಟಿಗೆ ಮುಕ್ತವಾಗುತ್ತಿದ್ದಂತೆಯೇ ಪವಿತ್ರ ಯಾತ್ರಾ ಸ್ಥಳ ಕೇದಾರನಾಥ ಧಾಮಕ್ಕೆ ಭಕ್ತಾದಿಗಳ ದಂಡೇ ಹರಿದು ಬರಲಾರಂಭಿಸಿದೆ.

ಹಿಮಾಲಯ ಪರ್ವತಶ್ರೇಣಿಗಳ ನಡುವೆ ಈಗ ಮತ್ತೆ ’ಹರ ಹರ ಮಹಾದೇವ್’ ಕೇಳಲಾರಂಭಿಸಿದೆ. ಈ ನಡುವೆ ಸ್ತೋತ್ರಗಳ ವಿಧ್ಯುಕ್ತ ಪಠಣ ಆಸ್ತಿಕರನ್ನು ಸೆಳೆಯುತ್ತಿದೆ. ದೇಶದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ಕೇದಾರನಾಥ ಭಗವಾನ್ ಶಿವನಧಾಮವನ್ನು ಬರೋಬ್ಬರಿ 40 ಕ್ವಿಂಟಾಲ್ ಹೂವುಗಳ ದಳಗಳಿಂದ ಅಲಂಕರಿಸಲಾಗಿತ್ತು.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ತಮ್ಮ ಪತ್ನಿ ಗೀತಾ ಧಾಮಿ ಜೊತೆ ಕೇದಾರನಾಥನ ದರುಶನ ಪಡೆದಿದ್ದಾರೆ. ನಾಳೆ ಬದರಿನಾಥ ಧಾಮ ಭಕ್ತರ ಭೇಟಿಗೆ ತೆರೆದುಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!