ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್ ನಿವಾಸದಲ್ಲಿ ಇ.ಡಿ ದಾಳಿ ನಡೆಸಿದ್ದು, ನನ್ನ ಗರ್ಭಿಣಿ ಸೊಸೆಯನ್ನು 15 ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಾಡಿದೆ ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ನಾನು ತುರ್ತು ಪರಿಸ್ಥಿತಿಯ ಕರಾಳ ಮುಖವನ್ನು ನೋಡಿದ್ದೇನೆ, ಅದರ ವಿರುದ್ಧ ಹೋರಾಡಿದ್ದೇನೆ. ಬಿಜೆಪಿ ಪ್ರಭಾವದಿಂದ ನನ್ನ ಪುತ್ರಿಯರು, ಚಿಕ್ಕ ಮೊಮ್ಮಕ್ಕಳು ಹಾಗೂ ಗರ್ಭಿಣಿ ಸೊಸೆಯನ್ನು ೧೫ ಗಂಟೆ ಕುಳಿತಲ್ಲೇ ಕೂರುವಂತೆ ಮಾಡಿದೆ. ನನ್ನ ವಿರುದ್ಧ ರಾಜಕೀಯ ಹೋರಾಟ ಮಾಡೋದಕ್ಕೆ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬೇಕಿದ್ದೇ ಎಂದು ಪ್ರಶ್ನಿಸಿದ್ದಾರೆ.