ಜಿಂಬಾಬ್ವೆ ವಿರುದ್ದ ಹರಸಾಹಸದ ಗೆಲುವು: ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಂ ಇಂಡಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ 13 ರನ್ ಸೋಲು ಕಂಡಿದೆ.
ಜಿಂಬಾಬ್ವೆ ಪರ ಸಿಖಂದರ್ ರಾಜಾ ಸೆಂಚುರಿ ಮಾಡಿ ತಂಡದ ಗೆಲುವಿಗೆ ಪ್ರಯತ್ನ ಮಾಡಿದಾದರೂ ಅಂತಿಮ ಕ್ಷಣ ಟೀಮ್ ಇಂಡಿಯಾ ಗೆಲುವು ಸಾದಿಸುವ ಮೂಲಕ 3-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.
ಜಿಂಬಾಬ್ವೆ ಗೆಲುವಿಗೆ ಭಾರತ 290 ರನ್ ಟಾರ್ಗೆಟ್ ನೀಡಿತ್ತು. ಇದರ ಬೆನ್ನತ್ತಿದ್ದ ಜಿಂಬಾಬ್ವೆಗೆ ನಿರೀಕ್ಷಿತ ಆರಂಭವೂ ಸಿಗಲಿಲ್ಲ. ತಕುಡ್ಜವಾನ್ಶೆ ಕೈಟಾನೋ ಹಾಗೂ ಇನೋಸೆಂಟ್ ಕೈಯಿಯಾ ಹೋರಾಟ ಬಹುಬೇಗನೆ ಅಂತ್ಯಗೊಂಡಿತ್ತು. ಕೈಟಾನೋ 13 ರನ್ ಸಿಡಿಸಿ ಔಟಾದರೆ, ಕೆಯಿಯಾ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಸೀನ್ ವಿಲಿಯಮ್ಸ್ ಹಾಗೂ ಟೊನಿ ಮುನ್ಯೊಂಗ ಜೊತೆಯಾಟದಿಂದ ಚೇತರಿಸಿಕೊಂಡಿತು. ಸೀನ್ ವಿಲಿಯಮ್ಸ್ 46 ಎಸೆತದಲ್ಲಿ 45 ರನ್ ಕಾಣಿಕೆ ನೀಡಿದರು. ಇತ್ತ ಟೋನಿ 15 ರನ್ ಸಿಡಿಸಿ ನಿರ್ಗಮಿಸಿದರು.
ಸಿಖಂದರ್ ರಾಜಾ ಹೋರಾಟ ಜಿಂಬಾಬ್ವೆ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿತು. ಟೀಂ ಇಂಡಿಯಾ ದಾಳಿಗೆ ದಿಟ್ಟ ಹೋರಾಟ ನೀಡಿದ ಸಿಖಂದರ್ ರಾಜಾ ಜಿಂಬಾಬ್ವೆ ತಂಡಕ್ಕೆ ಆಸರೆಯಾದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಇದು ಜಿಂಬಾಬ್ವೆ ತಂಡಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!