January16, 2026
Friday, January 16, 2026
spot_img

ಮಾಡೆಲ್ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ?: ವೈರಲ್ ಆಗ್ತಿದೆ ಈ ಜೋಡಿಯ ಫೋಟೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗೆ ಅವರು ತಮ್ಮ ಹೊಸ ಗೆಳತಿ ಎಂದೇ ಹೇಳಲಾಗುತ್ತಿರುವ ಮಹಿಕಾ ಶರ್ಮಾ ಜೊತೆಯ ಫೋಟೋ ಮತ್ತು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥದ ಊಹಾಪೋಹಕ್ಕೆ ಮತ್ತಷ್ಟು ಬಣ್ಣ ತುಂಬಿದೆ. ಈ ಚಿತ್ರಗಳಲ್ಲಿ ಮಹಿಕಾ ಅವರ ಕೈಯಲ್ಲಿ ಹೊಳೆಯುವ ದೊಡ್ಡ ವಜ್ರದ ಉಂಗುರವೇ ಎಲ್ಲರ ಗಮನ ಸೆಳೆದಿದೆ.

ಸಾಂಪ್ರದಾಯಿಕ ಉಡುಪಿನಲ್ಲಿದ್ದ ಈ ಜೋಡಿಯ ಫೋಟೋಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಾಮೆಂಟ್‌ಗಳಲ್ಲಿ “ನಿಶ್ಚಿತಾರ್ಥ ಖಚಿತ” ಎಂದು ಬರೆಯಲು ಆರಂಭಿಸಿದ್ದಾರೆ. ಹಾರ್ದಿಕ್ ಹಂಚಿಕೊಂಡಿರುವ ಈ ಪೋಸ್ಟ್‌ನಲ್ಲಿ ಮಗ ಅಗಸ್ತ್ಯನ ಝಲಕ್ ಸಹ ಕಾಣಿಸಿಕೊಂಡಿದೆ.

ಇತ್ತೀಚೆಗೆ ಹಾರ್ದಿಕ್, ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ಜುಲೈ 2024ರಲ್ಲಿ ವಿಚ್ಛೇದನ ಪಡೆದಿದ್ದರಿಂದ, ಅವರ ಹೊಸ ಸಂಬಂಧದ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ವಿಚ್ಛೇದನದ ನಂತರ ಹಾರ್ದಿಕ್–ಮಹಿಕಾ ಸಂಬಂಧದ ಸುದ್ದಿ ಹರಿದಾಡುತ್ತಿದ್ದರೂ, ಹುಟ್ಟುಹಬ್ಬದ ದಿನ ಹಾರ್ದಿಕ್ ಹಂಚಿಕೊಂಡ ಫೋಟೋಗಳು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ.

ಹಾರ್ದಿಕ್–ಮಹಿಕಾ ಜೋಡಿಯ ನಿಶ್ಚಿತಾರ್ಥದ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬರಬೇಕಿದೆ, ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಶುಭಾಶಯಗಳ ಮಳೆ ಹರಿಯುತ್ತಿದೆ.

Must Read

error: Content is protected !!