ಹಾರ್ದಿಕ್‌ ಪಾಂಡ್ಯ ಪ್ರೊಫೆಶನಲ್‌ ಲೈಫ್‌ ಜೊತೆ ಪರ್ಸನಲ್‌ ಲೈಫ್‌ನಲ್ಲೂ ಸಮಸ್ಯೆ! ನತಾಶಾ ಜೊತೆ ಡಿವೋರ್ಸ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಾಗಿನಿಂದ ಹಾರ್ದಿಕ್ ಪಾಂಡ್ಯ ಒಂದಲ್ಲಾ  ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Who is Natasa Stankovic, Hardik Pandya's wife facing unfair comments for  his IPL captaincy row | Bollywood - Hindustan Timesಈ ಬಾರಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಕಳಪೆ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬಿದ್ದಿದೆ. ಪಾಂಡ್ಯ ಪ್ರೊಫೆಶನಲ್‌ ಲೈಫ್‌ ಸಮಸ್ಯೆ ಜೊತೆಗೆ ಪರ್ಸನಲ್‌ ಲೈಫ್‌ನಲ್ಲಿಯೂ ಸಮಸ್ಯೆ ಇದ್ದಂತೆ ಕಾಣುತ್ತಿದೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಲವ್ವಿ ಡವ್ವಿಯಾಗಿ ಕಾಣಿಸಿಕೊಳ್ಳುವ ಪಾಂಡ್ಯ ಕಪಲ್‌ ನಡುವೆ ಡಿವೋರ್ಸ್‌ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Hardik Pandya-Natasha Stankovic To Renew Their Wedding Vows, They Will Tie  Knot On Valentine's Day2020 ರಲ್ಲಿ ವಿವಾಹವಾದ ಹಾರ್ದಿಕ್-ನತಾಶಾ ಲಾಕ್‌ಡೌನ್‌ ಮದುವೆಯಿಂದ ಬೇಸರವಾಗಿ ಮತ್ತೊಮ್ಮೆ ಅದ್ಧೂರಿ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ನತಾಶಾ ಹಾಗೂ ಪಾಂಡ್ಯ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ನತಾಶಾ ಒಂದೇ ಒಂದು ಪಂದ್ಯ ವೀಕ್ಷಣೆಗೆ ಬಂದಿಲ್ಲ. ನತಾಶಾ ಏಕೆ ಮೈದಾನಕ್ಕೆ ಬಂದಿಲ್ಲ ಎಂಬ ಪ್ರಶ್ನೆಗಳಿವೆ. ಮಾರ್ಚ್ 4 ನತಾಶಾ ಅವರ ಜನ್ಮದಿನ. ಆಗ ಹಾರ್ದಿಕ್ ಪಾಂಡ್ಯ ಸೋಷಿಯಲ್ ಮೀಡಿಯಾದಲ್ಲೂ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರಲಿಲ್ಲ. ಇದು ಬ್ರೇಕಪ್ ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ.

Natasa Stankovic says Hardik Pandya hugged her when they first met, she was  going for a handshake: 'I had not seen such a person' | Bollywood News -  The Indian Expressಮತ್ತೊಂದೆಡೆ, ನತಾಶಾ ತನ್ನ ಇನ್​ಸ್ಟಾಗ್ರಾಮ್ ಬಯೋದಿಂದ ಪಾಂಡ್ಯ ಉಪನಾಮವನ್ನು ತೆಗೆದುಹಾಕಿದ್ದಾರೆ. ಅಲ್ಲದೇ ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಜೊತೆಗಿನ ಫೋಟೋಗಳು ಶೇರ್ ಆಗುತ್ತಿಲ್ಲ. ಹೀಗಾಗಿ ಇವರಿಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಆದರೆ, ಈ ಬಗ್ಗೆ ಇಬ್ಬರೂ ಅಧಿಕೃತ ಮಾಹಿತಿ ನೀಡಿಲ್ಲ.

Did Hardik Pandya, Natasha Stankovic Split? Reports Suggest Trouble Brewing  - myKhel

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!