ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕಿರುವ ಕ್ಯೂಟ್ ಜೋಡಿ ಹರಿಪ್ರಿಯಾ- ವಸಿಷ್ಠ ಸಿಂಹ. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ಇತ್ತೀಚೆಗಷ್ಟೇ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಪ್ರೀತಿಯ ಬಗ್ಗೆ ಜಗತ್ತಿಗೆ ತಿಳಿಸಿದ್ದರು.
ಮುಂದಿನ ವರ್ಷ ಹಸೆಮಣೆ ಏರಲಿರುವ ಈ ಜೋಡಿ ಒಂದಿಲ್ಲಾ ಒಂದು ಸುದ್ದಿಯಲ್ಲಿದ್ದಾರೆ. ಇದೀಗ ವಸಿಷ್ಠ ಸಿಂಹ ಬಹುನಿರೀಕ್ಷಿತ ಸಿನಿಮಾ ಲವ್ ಲಿ ಅಡ್ಡಕ್ಕೆ ಹರಿಪ್ರಿಯಾ ಭೇಟಿ ನೀಡಿದ್ದಾರೆ. ಸಿಂಹಗೆ ಸರ್ಪ್ರೈಸ್ ನೀಡಲು ಹರಿಪ್ರಿಯಾ ಉಡುಪಿಯ ಸೆಟ್ಗೆ ಬಂದಿದ್ದು, ವಸಿಷ್ಠ ಸಿಂಹ ತುಂಬಾನೇ ಖುಷಿಯಾಗಿದ್ದಾರೆ. ಇಡೀ ಚಿತ್ರತಂಡಕ್ಕೆ ಹರಿಪ್ರಿಯಾ ತಮ್ಮ ಫಿಯಾನ್ಸಿ ಎಂದು ಪರಿಚಯ ಮಾಡಿಸಿಕೊಟ್ಟಿದ್ದಾರೆ.