ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ನ ಪೊನ್ನಣ್ಣ ಇಂದು ಕೊಡವ ಶೈಲಿಯಲ್ಲಿ ಅದ್ಧೂರಿ ವಿವಾಹವಾಗುತ್ತಿದ್ದಾರೆ.
ಈಗಾಗಲೇ ಶಾಸ್ತ್ರಗಳು ಆರಂಭವಾಗಿದ್ದು, ವಿರಾಜಪೇಟೆತ ಅಮ್ಮತ್ತಿ ಕೊಡವ ಸಮಾಜದಲ್ಲಿ ವಿವಾಹ ನಡಯುತ್ತಿದೆ. ಮದುವೆ ಹತ್ತಿರ ಇದ್ದ ಕಾರಣ ಇಬ್ಬರೂ ಚಿತ್ರರಂಗದಿಂದ ದೂರ ಇದ್ದು, ಮದುವೆಯ ನಂತರ ಕಮ್‌ಬ್ಯಾಕ್ ಮಾಡಲಿದ್ದಾರೆ.
ದಶಕಗಳ ಲವ್‌ಸ್ಟೋರಿ ಇವರದ್ದಾಗಿದ್ದು, ಮನೆಯವರನ್ನೂ ಒಪ್ಪಿಸಿ ಇದೀಗ ಮದುವೆಯಾಗಿದ್ದಾರೆ. ಮದುವೆಗೂ ಮುನ್ನವೇ ಭುವನ್ ಹರ್ಷಿಕಾಗೆ ಮನೆಯೊಂದನ್ನು ಗಿಫ್ಟ್ ನೀಡಿದ್ದು, ಇತ್ತೀಚೆಗಷ್ಟೇ ಗೃಹಪ್ರವೇಶ ನಡೆದಿದೆ.
ಪಿಂಕ್ ಎಂಬ್ರಾಯ್ಡರಿ ಸೀರೆಯನ್ನು ಕೊಡವ ಶೈಲಿಯಲ್ಲಿ ಹರ್ಷಿಕಾ ಉಟ್ಟಿದ್ದಾರೆ. ಭುವನ್ ಕೂಡ ಕೊಡವ ಶೈಲಿಯ ಬಟ್ಟೆ ಧರಿಸಿದ್ದಾರೆ.