ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ರಾಜ್ಯದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಲಾಡ್ವಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಪಕ್ಷದ ಹಿರಿಯ ನಾಯಕ ಅನಿಲ್ ವಿಜ್ ಅಂಬಾಲಾ ಕ್ಯಾಂಟ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಈ ವರ್ಷದ ಜೂನ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಅವರು ಗೆದ್ದಿರುವ ಕರ್ನಾಲ್ ಅಸೆಂಬ್ಲಿ ಸ್ಥಾನವನ್ನು ಪ್ರಸ್ತುತ ಅವರು ಪ್ರತಿನಿಧಿಸುತ್ತಿರುವ ಕಾರಣ ಮುಖ್ಯಮಂತ್ರಿ ಸೈನಿ ಅವರ ಕ್ಷೇತ್ರವನ್ನು ಬಿಜೆಪಿ ಬದಲಾಯಿಸಿದೆ.
ಹರಿಯಾಣ ಮಾಜಿ ಗೃಹ ಸಚಿವ ವಿಜ್ ಅವರು ತಮ್ಮ ಸ್ಥಾನದಿಂದ ಟಿಕೆಟ್ ಉಳಿಸಿಕೊಂಡರು. ಅಂಬಾಲಾ ಕಂಟೋನ್ಮೆಂಟ್ ನಿಂದ ಅವರು 2009 ರಿಂದ ಸತತ ಮೂರು ಬಾರಿ ಗೆಲುವು ದಾಖಲಿಸಿದ್ದಾರೆ.