ಕೊಹ್ಲಿ ಫೋನ್ ಯಾರಾದ್ರೂ ನೋಡಿದ್ರಾ ? ಹೊಸ ಫೋನ್ ಕಳ್ಕೊಂಡ ದುಃಖದಲ್ಲಿದ್ದಾರೆ ವಿರಾಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಫೋನ್ ಕಳೆದುಕೊಂಡಿದ್ದಾರಂತೆ!

ಫೋನ್ ಕಳೆದುಕೊಂಡ ಬೇಜಾರನ್ನು ಫ್ಯಾನ್ಸ್ ಜತೆ ಹಂಚಿಕೊಂಡಿದ್ದು, ಯಾರಾದ್ರೂ ನನ್ ಫೋನ್ ನೋಡಿದ್ದೀರಾ? ಓಪನ್ ಕೂಡ ಮಾಡದ ಹೊಸ ಫೋನ್‌ನ್ನು ಕಳೆದುಕೊಂಡ ದುಃಖ ಊಹಿಸೋಕೆ ಸಾಧ್ಯವಿಲ್ಲ ಎಂದು ವಿರಾಟ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸಾಕಷ್ಟು ಫನ್ನಿ ಕಮೆಂಟ್‌ಗಳು ಬರುತ್ತಿವೆ, ಝೊಮ್ಯಾಟೊ ಕಮೆಂಟ್ ಮಾಡಿದ್ದು, ಅತ್ತಿಗೆ ಫೋನ್‌ನಿಂದ ಐಸ್‌ಕ್ರೀಂ ಆರ್ಡರ್ ಮಾಡಿ, ದುಃಖ ಕಮ್ಮಿ ಆಗುತ್ತದೆ ಎಂದು ಹೇಳಿದ್ದಾರೆ. ಫೋನ್ ಕಳೆದು ಹೋದ್ರೆ ಹೋಯ್ತು, ಈಗಲಾದ್ರೂ ಆಟದ ಕಡೆ ಗಮನ ಕೊಡಿ ಎಂದು ಕೆಲವರು ಕಾಲೆಳೆದಿದ್ದಾರೆ. ಸಾಮಾಜಿಕ ಜಾಲತಾಣಂದಲ್ಲಿ ಕೊಹ್ಲಿ ದುಃಖ ತೋಡಿಕೊಂಡಿದ್ದು, ಯಾರಾದರೂ ಕೊಹ್ಲಿ ಫೋನ್ ಹುಡುಕಿ ಕೊಡ್ತಾರಾ? ಕಾದು ನೋಡಬೇಕಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!