ಯೂಟರ್ನ್ ಹೊಡೆದ ಮಾರುಕಟ್ಟೆ- ಏರುಗತಿಯಲ್ಲಿವೆ ಅದಾನಿ ಷೇರುಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕದ ತನಿಖಾ ಸಂಸ್ಥೆ ಹಿಂಡೆನ್‌ ಬರ್ಗ್‌ ವರದಿಯ ಹಿನ್ನೆಲೆಯಲ್ಲಿ ಕಳೆದೊಂದು ವಾರದಲ್ಲಿ ಲಕ್ಷಕೋಟಿರೂಪಾಯಿಗಳಲ್ಲಿ ನಷ್ಟ ಅನುಭವಿಸಿದ್ದ ಅದಾನಿ ಸಮೂಹದ ಷೇರುಗಳು ಮಂಗಳವಾರದ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿ ವಹಿವಾಟು ನಡೆಸುತ್ತಿವೆ.

ಕಳೆದ 8 ದಿನದ ಮಾರುಕಟ್ಟೆ ಅವಧಿಯಲ್ಲಿ ಅದಾನಿ ಸಮೂಹದ ಏಳು ಕಂಪನಿಯ ಶೇರುಗಳು 30 ಶೇಕಡಾಗೂ ಹೆಚ್ಚು ಕುಸಿದು ನೀರಸ ಪ್ರದರ್ಶನ ತೋರಿದ್ದವು. ಆದರೆ ಮಂಗಳವಾರದ ಮಾರುಕಟ್ಟೆಯಲ್ಲಿ ಯೂಟರ್ನ್‌ ಹೊಡೆದಿದ್ದು ಪ್ರಮುಖ ಕಂಪನಿಯ ಷೇರುಗಳು 20 ಶೇಕಡಾದಷ್ಟು ಏರಿವೆ. ಎಕ್ಸ್‌ಚೇಂಜ್‌ಗಳಲ್ಲಿ ಪಟ್ಟಿ ಮಾಡಲಾದ 10 ಅದಾನಿ ಸ್ಟಾಕ್‌ಗಳಲ್ಲಿ ಕೇವಲ ಎರಡು ಮಾತ್ರ ಕಡಿಮೆ ವಹಿವಾಟು ನಡೆಸುತ್ತಿವೆ.

ಅದಾನಿ ಪೋರ್ಟ್ಸ್ 9 ಶೇ.ಕ್ಕಿಂತ ಹೆಚ್ಚು ಏರಿದ್ದರೆ ಅದಾನಿ ಟ್ರಾನ್ಸ್‌ಮಿಷನ್‌ನ ಷೇರುಗಳು 5 ಶೇಕಡಾ ಹೆಚ್ಚಳ ದಾಖಲಿಸಿದೆ. ಅದಾನಿ ವಿಲ್ಮರ್ ಕೂಡ 5 ಶೇಕಡಾ ಹೆಚ್ಚಿದೆ. ಇವುಗಳ ಪೈಕಿ ಅದಾನಿ ಟೋಟಲ್‌ ಗ್ಯಾಸ್‌ ಮತ್ತು ಅದಾನಿ ಪವರ್‌ ಈ ಎರಡು ಕಂಪನಿಯ ಷೇರುಗಳು ಮಾತ್ರ ಕೆಂಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ನಿನ್ನೆಯಷ್ಟೇ ಅದಾನಿ ಸಮೂಹವು 1.1 ಶತಕೋಟಿ ಡಾಲರ್‌ ಸಾಳವನ್ನು ಮುಂಚಿತವಾಗಿ ಪಾವತಿಸಿತ್ತು. ಈ ವಿದ್ಯಮಾನವು ಇಂದಿನ ಷೇರು ಮಾರಾಟ ಚೇತರಿಕೆಯನ್ನು ಪ್ರಭಾವಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!