CINE | ಸಕ್ಸಸ್‌ಫುಲ್‌ ಡೈರೆಕ್ಟರ್‌ ಅಟ್ಲೀಗೆ ಬಾಲಿವುಡ್‌ನಲ್ಲಿ ಅವಮಾನ ಆಯ್ತಾ? ಏನಿದು ಸುದ್ದಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಿರ್ದೇಶಕ ಅಟ್ಲಿ ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ದಕ್ಷಿಣದಲ್ಲಿ ಮಿಂಚಿದ ಬಳಿಕ ನೇರವಾಗಿ ‘ಜವಾನ್’ ಸಿನಿಮಾ ಮೂಲಕ ಬಾಲಿವುಡ್​ಗೆ ಟಿಕೆಟ್ ಪಡೆದರು.

ಅಲ್ಲಿ ಅವರ ಸಿನಿಮಾಗಳು ಸಾಕಷ್ಟು ಹೆಸರು ಮಾಡಿದವು. ಈಗ ಅವರಿಗೆ ಬಾಲಿವುಡ್​ನಲ್ಲಿ ಕಷ್ಟ ಎದುರಾಗಿದೆ. ಅವರ ನಿರ್ಮಾಣದ ಹೊಸ ಸಿನಿಮಾ ‘ಬೇಬಿ ಜಾನ್’ 50 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡಿದೆ.

ಅಟ್ಲಿ ಅವರಿಗೆ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ನಿರ್ದೇಶನದ ‘ಜವಾನ್’ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಗಮನ ಸೆಳೆದಿದೆ. ಈಗ ಅವರು ಹಿಂದಿಯಲ್ಲೇ ಸಿನಿಮಾ ನಿರ್ಮಾಣಕ್ಕೆ ಇಳಿದರು. ತಮ್ಮದೇ ನಿರ್ದೇಶನದ ‘ಥೇರಿ’ ಚಿತ್ರವನ್ನು ಹಿಂದಿಗೆ ‘ಬೇಬಿ ಜಾನ್’ ಹೆಸರಲ್ಲಿ ರಿಮೇಕ್ ಮಾಡಿದರು. ಈ ಚಿತ್ರಕ್ಕೆ ಅವರು ನಿರ್ಮಾಪಕರಾದರೂ ಮುಂದೆ ನಿಂತು ಸಿನಿಮಾ ಪ್ರಚಾರದಲ್ಲಿ ಭಾಗಿ ಆದರು. ಆದರೆ, ಸಿನಿಮಾಗೆ ಹಿನ್ನಡೆ ಆಗಿದೆ. ಅನೇಕರು ಮೂಲ ಚಿತ್ರದ ಜೊತೆ ಇದನ್ನು ಹೋಲಿಕೆ ಮಾಡುತ್ತಿದ್ದಾರೆ.

ಅಟ್ಲಿ ಅವರು ‘ಬೇಬಿ ಜಾನ್’ ಚಿತ್ರದ ಬಗ್ಗೆ ಹೊಗಳಿದ್ದರು. ‘ರಣಬೀರ್ ಕಪೂರ್ ಅವರನ್ನು ಅನಿಮಲ್ ಸಿನಿಮಾ ಹೇಗೆ ಸೂಪರ್​ಸ್ಟಾರ್ ಆಗಿ ಮಾಡಿತೋ ಅದೇ ರೀತಿ ಬೇಬಿ ಜಾನ್ ಸಿನಿಮಾ ವರುಣ್ ಧವನ್​ನ ಸ್ಟಾರ್ ಆಗಿಸುತ್ತದೆ’ ಎಂದಿದ್ದರು. ಆದರೆ, ಅದು ಕೇವಲ ಮಾತಿಗೆ ಸೀಮಿತ ಆಗಿದೆ. ಅಂದುಕೊಂಡಂತೆ ಏನೂ ನಡೆದಿಲ್ಲ.

‘ಬೇಬಿ ಜಾನ್’ ಸಿನಿಮಾಗೆ ವೀಕೆಂಡ್​ನಲ್ಲೂ ಕಲೆಕ್ಷನ್ ಆಗಿಲ್ಲ. ಈ ಚಿತ್ರದ ಒಟ್ಟಾರೆ ಗಳಿಕೆ 27 ಕೋಟಿ ರೂಪಾಯಿ ಆಗಿದೆ. ಈ ಚಿತ್ರ 50 ಕೋಟಿ ರೂಪಾಯಿ ಆದರೂ ಗಳಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. 1000 ಕೋಟಿ ರೂಪಾಯಿ ಬಿಸ್ನೆಸ್ ಎಲ್ಲಿ, 27 ಕೋಟಿ ರೂಪಾಯಿ ಬಿಸ್ನೆಸ್ ಎಲ್ಲಿ ಎಂದು ಅನೇಕರು ಹೋಲಿಕೆ ಮಾಡುತ್ತಿದ್ದಾರೆ. ಹೀಗಾಗಿ, ‘ಬೇಬಿ ಜಾನ್’ ಚಿತ್ರವನ್ನು ದೊಡ್ಡ ಡಿಸಾಸ್ಟರ್ ಎಂದು ಘೋಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!