ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಇಂದು ರಾಷ್ಟ್ರ ರಾಜಧಾನಿಯ ಸಂಗಮ್ ವಿಹಾರ್‌ಗೆ ಭೇಟಿ ನೀಡಿ ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಮುಖ್ಯಮಂತ್ರಿ ಅತಿಶಿ ಇಲ್ಲಿಗೆ ಬರಬೇಕು ಎಂದು ತಮ್ಮದೇ ಆಮ್ ಆದ್ಮಿ ಪಕ್ಷಕ್ಕೆ ಸವಾಲು ಹಾಕಿದ್ದಾರೆ. ಇಲ್ಲಿನ ಜನರು ನರಕದಂತಹ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
“ಇದು ದೆಹಲಿಯ ಸಂಗಮ್ ವಿಹಾರ್ ಪ್ರದೇಶ. ಇಲ್ಲಿನ ಜನ ನರಕಯಾತನೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಉದ್ದೇಶಪೂರ್ವಕವಾಗಿ ದೆಹಲಿಯ ಮಧ್ಯಮ ವರ್ಗದ ಜನರನ್ನು ಇಂತಹ ಸ್ಥಿತಿಗೆ ತಳ್ಳಲಾಗಿದೆ. ಇಂತಹ ಪರಿಸ್ಥಿತಿ ಎಲ್ಲಿಯೂ ಇಲ್ಲ. ರಸ್ತೆಗಳಿಲ್ಲ, ಚರಂಡಿಗಳು ತುಂಬಿ ತುಳುಕುತ್ತಿದ್ದು, ವರ್ಷವಿಡೀ ಗಬ್ಬು ನಾರುವ ನೀರು ನಿಂತಿದೆ ನಿಮಗೆ ಧೈರ್ಯವಿದ್ದರೆ ಈ ಕ್ಷೇತ್ರಕ್ಕೆ ಬನ್ನಿ @ArvindKejriwal ಮತ್ತು @AtishiAAP, ಜನರು ನಿಮ್ಮ ಎಲ್ಲಾ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತಾರೆ” ಎಂದು ಮಲಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.