ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯದೇವರಕೊಂಡ ಹಾಗೂ ಸಮಂತಾ ಅಭಿನಯದ ಖುಷಿ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ.
ಹೀಗಿರುವಾಗ ಪ್ರಚಾರದ ವೇಳೆ ಕೆಲವು ಹೀರೋಗಳ ಸಿನಿಮಾ ಕೂಡ ಸಾಕಷ್ಟು ಫ್ಲಾಪ್ ಆಗಿದೆ ಎಂದು ವಿಜಯ್ ಹೇಳಿದ್ದು ಅಭಿಮಾನಿಗಳಿಗೆ ನೋವಾಗಿದೆ.
ವಿಜಯ್ ಥಳಪತಿ, ರಜನಿಕಾಂತ್ ಹಾಗೂ ಚಿರಂಜೀವಿ ಅವರು ಕೂಡ ಹಲವಾರು ಫ್ಲಾಪ್ ಕೊಟ್ಟಿದ್ದಾರೆ. ರಜನಿ ಸರ್ ಸಾಕಷ್ಟು ಫ್ಲಾಪ್ ಸಿನಿಮಾ ಕೊಟ್ಟರೂ ಜೈಲರ್‌ನಲ್ಲಿ ಹಿಟ್ ಆಗಿಲ್ವಾ? ಸೋಲನ್ನು ಯಾವ ನಟರೂ ಕಡೆಗಣಿಸಿಲ್ಲ. ಅದನ್ನು ಮೀರಿ ಗೆಲುವು ಪಡೆದಿದ್ದಾರೆ. ಅದಕ್ಕೇ ಅವರನ್ನು ಸೂಪರ್‌ಸ್ಟಾರ‍್ಸ್ ಅನ್ನೋದು ಎಂದು ಹೇಳಿದ್ದಾರೆ.
ವಿಜಯ್ ಅಭಿಮಾನಿಗಳು ಮಾತ್ರ ಅವರು ಹೇಳೋದ್ರಲ್ಲಿ ತಪ್ಪೇನಿದೆ, ಇರೋದನ್ನೇ ತಾನೆ ಹೇಳ್ತಿದ್ದಾರೆ ಎಂದು ಸಮಜಾಯಿಸಿ ಕೊಟ್ಟಿದ್ದಾರೆ.