ನ.2 ರಂದು ಹಾಸನಾಂಬ ದೇವಿಯ ಉತ್ಸವ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಶುರು

ಹೊಸದಿಗಂತ ವರದಿ ಹಾಸನ :

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ಉತ್ಸವ ನ. ೨ ರಿಂದ ನ.೧೫ ವರೆಗೆ ತೆರಯಲಿದ್ದು, ಉತ್ಸವಕ್ಕೆ ಜಿಲ್ಲಾಡಳಿತ ಈಗಾಗಲೇ ಸಕಲಾ ಸಿದ್ಧತೆಗಳನ್ನು ಕಲ್ಪಿಸುವಲ್ಲಿ ತಯಾರಿ ನಡೆಸಿದೆ.

ವರ್ಷದಲ್ಲೆ ಒಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ಉತ್ಸವು ಈ ಬಾರಿ ಅ.೨ ರಿಂದ ೧೫ ವರೆಗೆ ನಡೆಯಲಿದೆ. ಗರ್ಭಗುಡಿ ತೆರೆದ ದಿನ ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ದರ್ಶನ ಭಾಗ್ಯ ಒದಗಿಸಲಾಗುವುದಿಲ್ಲ. ಅಂದರೆ ನ.೩ ಮತ್ತು ನ.೧೧ ರವೆಗೆ ದರ್ಶನ ಭಾಗ್ಯ ದೊರಯಲಿದೆ. ಒಟ್ಟಾರೆ ಸುಮಾರು ೧೨ ದಿನಗಳ ಕಾಲ ಹಾಸನಾಂಬೆಯ ಬಾಗಿಲು ತೆರೆದಿರಲಿದೆ.

ಹತ್ತು ಲಕ್ಷ ಭಕ್ತರ ನೀರಿಕ್ಷೆ
ದೇವಾಲಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನಿಖರವಾಗಿ ಹೇಳುವುದಾದರೆ, ಕಳೆದ ಭಾರಿ ಆರು ಲಕ್ಷ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದರು. ಮಹಿಳೆಯರಿಗೆ ಸರಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಅವಕಾಶ, ಮತ್ತು ಕೋವಿಡ್‌ ನಂತಹ ಯಾವುದೇ ಅಡಚಣೆ ಇಲ್ಲದ ಕಾರಣ ಈ ಭಾರಿ ಹತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನೀರಿಕ್ಷಯನ್ನು ಹೊಂದಲಾಗಿದೆ.

ದಿನದ ೨೪ ಕಾಲ್ಕು ಗಂಟೆಯು ದರ್ಶನ ಭಾಗ್ಯ
ಈ ಬಾರಿ ದಿನದ ೨೪ ಗಂಟೆಯು ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಸರತಿ ಸಾಲಿನಲ್ಲಿ ಸಾಗಿಬರುವ ಭಕ್ತಾಧಿಗಳಿಗೆ ತೊಂದರೆಯಾಗದಂತೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಪ್ಯಾನ್ ವ್ಯವಸ್ಥೆ ಜೊತೆಗೆ ಗರ್ಭಗುಡಿಯಲ್ಲಿ ನಡೆಯುವ ಪೂಜೆ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಎಲ್.ಇ.ಡಿ. ಪರದೆ ಹಾಗೂ ಟಿ.ವಿ.ಗಳ ಅಳವಡಿಕೆ ಇರಲಿದೆ.

ವಿಐಪಿ ಪಾಸ್‌ ಒಂದು ಸಾವಿರ, ಸಾಮಾನ್ಯ ಪಾಸ್‌ ಮುನ್ನೂರು
ಹಾಸನಾಂಬ ದೇವಿಯ ದರ್ಶನಕ್ಕೆ ಸಾಮಾನ್ಯ ಪಾಸ್‌ಗೆ ಮುನ್ನೂರು ರೂ, ವಿಐಪಿ ಪಾಸ್‌ಗೆ ಒಂದು ಸಾವಿರ ರೂ ಅನ್ನು ನಿಗದಿಪಡಿಸಲಾಗಿದೆ. ವಿಶೇಷವೆಂದರೆ ಪಾಸ್‌ಗೆ ಕ್ಯೂ ಆರ್‌ ಕೋಡ್‌ ಅನ್ನು ಈ ಭಾರಿ ಅಳವಡಿಸಲಾಗಿತ್ತಿದೆ. ಕಾರಣ ಕಳೆದ ಭಾರಿ ಪಾಸ್ ಗಳನ್ನು ಕಲರ್ ಜೇರಾಕ್ಸ್ ಮಾಡಿಸಿ ದರ್ಶನ ಪಡೆಯಲಾಗಿತ್ತು ಎಂಬ ದೂರಿನ ಹಿನ್ನೆಲೆಯಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದೆ.

ದೇವಿ ದರ್ಶನಕ್ಕೆ ಬರುವ ಭಕ್ತಾಧಿಗಳು ಸಮಾದಾನದಿಂದ ದರ್ಶನ ಪಡೆದು ಹಿಂದಿರುಗಲು ಅಗತ್ಯ ಕ್ರಮವಹಿಸಬೇಕು. ಜಾತ್ರಾ ಸಂದರ್ಭದಲ್ಲಿ ಅಗತ್ಯ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ವ್ಯವಸ್ಥೆಗೆ ಯೋಜನೆ ತಯಾರಿಸಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿ ತೆರೆದು ಸಾರ್ವಜನಿಕರಿಂದ ಬೇಡಿಕೆ ಬಂದ ೧೦ ರಿಂದ ೧೫ ನಿಮಿಷದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!