Sunday, December 10, 2023

Latest Posts

ನವೆಂಬರ್ 2ರಿಂದ ಹಾಸನಾಂಬೆ ದರುಶನ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವರ್ಷಕ್ಕೊಮ್ಮೆ ದರುಶನ ಭಾಗ್ಯ ಕರುಣಿಸುವ ಹಾಸನಾಂಬೆ ದುರಶನ ಇದೇ ನವೆಂಬರ್‌ 2ರಿಂದ ಶುರವಾಗಲಿದೆ. ಮುಂದಿನ ಗುರುವಾರ ದೇಗುಲದ ಬಾಗಿಲು ತೆರೆಯಲಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನದ ನಿರೀಕ್ಷೆಯಿದೆ. 14 ದಿನಗಳ ದೇವಾಲಯ ಬಾಗಿಲು ತೆರೆದಿರುತ್ತದೆ. ಈ ಸಂದರ್ಭದಲ್ಲಿ ಮೊದಲ ಹಾಗೂ ಕೊನೆಯ ದಿನ ಹೊರತು ಪಡಿಸಿ ಮಿಕ್ಕಂತೆ ಎಲ್ಲಾ ದಿನಗಳಲ್ಲೂ ದಿನದ 24 ಗಂಟೆಯೂ ಹಾಸನಾಂಬೆ ಭಕ್ತರಿಗೆ ದರುಶನ ನೀಡಲಿದ್ದಾಳೆ.

ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ

ಇನ್ನೊಂದು ವಾರದಲ್ಲಿ ಹಾಸನಾಂಬೆ ದೇಗುಲ ತೆರೆಯಲಿರುವ ಕಾರಣದಿಂದ ಜಿಲ್ಲಾಧಿಕಾರಿ ಹಾಗೂ ಶಾಸಕ ಸ್ವರೂಪ್ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ ದೇವಿಯ ದುರಶನಕ್ಕೆ ಬರುವ ಭಕ್ತರಿಗೆ ಯಾವುದೇ ಅನಾನುಕೂಲತೆ ಉಂಟಾಗಂದತೆ ಮೂಲ ಸೌಕರ್ಯಗಳಿಂದ ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ.

ಇನ್ನು ಗರ್ಭಗುಡಿಯೊಳಗೆ ಭಕ್ತರಿಗೆ ಪೂಜೆ ಮಾಡಿಸಲು ಅವಕಾಶ ನೀಡಿಲ್ಲ. ಕೇವಲ ದರುಶನಕ್ಕಷ್ಟೇ ಅನುಮತಿಸಲಾಗಿದ್ದು, ಅರ್ಚನೆಳಿಗೆ ಬ್ರೇಕ್‌ ಹಾಕಲಾಗಿದೆ.

ಕಾಂಗ್ರೆಸ್‌ ಸರಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯ ಪ್ರಭಾವದಿಂದಾಗಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಉಚಿತ ಬಸ್‌ ಪ್ರಯಾಣ ಸೌಲಭ್ಯ ಇರುವುದರಿಂದ ಹೆಚ್ಚಿನ ಜನ ಬರುವ ಸಾಧ್ಯತೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!