ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಹಾಸನಾಂಬೆ ದೇವಿಯ ದರ್ಶನಕ್ಕ ಭಕ್ತರಿಗೆ ಇಂದಿನಿಂದ ಅವಕಾಶ ದೊರೆಯಲಿದೆ.
ದೇವಾಲಯದ ಬಾಗಿಲು ತೆರೆಯಲು ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಇದೇ ತಿಂಗಳ ೨೭ರವರೆಗೂ ಜಾತ್ರೆ ನಡೆಯಲಿದೆ. ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಕಾದು ಕುಳಿತಿದ್ದು, ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಒಟ್ಟಾರೆ ೧೨ ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದ್ದು,ಇಂದು ಮಧ್ಯಾಹ್ನ ೧೨:೩೦ಕ್ಕೆ ಬಾಳೆ ಕಂಬ ಕಡಿದು ದೇಗುಲದ ಬಾಗಿಲು ತೆರೆಯಲಿದ್ದಾರೆ. ಈ ಮೂಲಕ ಉತ್ಸವ ಆರಂಭವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಹಾಸನಾಂಬೆ ದೇಗುಲದ ದೇವಿಗೆ ಹಚ್ಚಿದ ದೀಪ ವರ್ಷದವರೆಗೂ ಆರುವುದಿಲ್ಲ, ದೇವಿಗೆ ಇಟ್ಟ ಹೂವು ಬಾಡುವುದಿಲ್ಲ ಎನ್ನುವ ನಂಬಿಕೆ ಜನರಿಗಿದೆ. ಇಂದು ಭಕ್ತರಿಗೆ ಪ್ರವೇಶವಿಲ್ಲ. ನಾಳೆ ಬೆಳಗ್ಗೆ ಆರರಿಂದ ಭಕ್ತರು ದೇವಿಯನ್ನು ಕಣ್ತುಂಬಿಕೊಳ್ಳಬಹುದು.