ಹ್ಯಾಟ್ಸ್ ಆಫ್: ಕೃತಕ ಕೈಗಳಿಂದ ವಯೋಲಿನ್ ನುಡಿಸಿ ಮೆಚ್ಚುಗೆಗೆ ಪಾತ್ರಳಾದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದಿನ ದಿನಗಳಲ್ಲಿ ದೇಹದ ಎಲ್ಲಾ ಅಂಗಾಂಗಗಳು ಯಥಾಸ್ಥಿತಿಯಲ್ಲಿದ್ದರೂ ನಾವೇನೂ ಮಾಡಲು ಸಾಧ್ಯವಿಲ್ಲ ಎಂಬ ಹತಾಶೆಯಲ್ಲಿ ಅನೇಕರು ಇದ್ದಾರೆ. ಆದರೆ ಈಕೆ ತನ್ನ ಅಂಗವೈಕಲ್ಯವನ್ನೂ ಲೆಕ್ಕಿಸದೆ ಕೃತಕ ಕೈಯಿಂದ ವಯೋಲಿನ್ ನುಡಿಸಿ ಸಾಧನೆ ಮಾಡಿದ್ದಾರೆ.

ಜಪಾನ್‌ನ ಮನಾಮಿ ಇಟೊ ಅವರು 2004 ರಲ್ಲಿ ನರ್ಸಿಂಗ್ ಓದುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಬಲಗೈ ಕಳೆದುಕೊಂಡರು. ಆದರೆ ಧೈರ್ಯ ಕಳೆದುಕೊಳ್ಳದೆ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆದರು. ಕೃತಕ ಕೈ ಮೂಲಕ  ವಯೋಲಿನ್‌ ನುಡಿಸುವುದನ್ನು ಅಭ್ಯಾಸ ಮಾಡಿಕೊಂಡರು. 2008 ರಲ್ಲಿ 12ನೇ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ತಮ್ಮ ಕೃತಕ ತೋಳಿನಿಂದಲೇ ವಯೋಲಿನ್‌ ನುಡಿಸಿದರು. 2020 ರಲ್ಲಿ ಮತ್ತೊಮ್ಮೆ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಪಿಟೀಲು ನುಡಿಸುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮನಮಿ ನರ್ಸ್ ಆಗಿ, ಈಜು ಪಟುವಾಗಿ ಜಪಾನ್ ದೇಶಾದ್ಯಂತ ಪ್ರದರ್ಶನ ನೀಡುತ್ತಾರೆ. ಅಂಗವೈಕಲ್ಯ ಎನ್ನುವುದು ದೇಹಕ್ಕೆ ಮಾತ್ರ ಮನಸಿಗಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!