ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗುವಿನ ಬೆಳವಣಿಗೆ ಎಂದರೆ ಕೇವಲ ದೇಹದ ಬೆಳವಣಿಗೆಯಷ್ಟೇ ಅಲ್ಲ. ಮಗುವಿನ ಮೆದುಳಿನ ಬೆಳವಣಿಗೆ ಸಹ ಮುಖ್ಯವಾಗುತ್ತದೆ. ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಮಾತ್ರ ಮೆದುಳಿನ ಸಮರ್ಪಕ ಬೆಳವಣಿಗೆ ಸಾಧ್ಯವಾಗುತ್ತದೆ. ಉತ್ತಮವಾದ ಪೋಷಕಾಂಶವುಳ್ಳ ಆಹಾರಗಳು ಮೆದುಳಿನ ಬೆಳವಣಿಗೆ ಸಹಕಾರವಾಗುತ್ತದೆ.
ಮೆದುಳಿನ ಆರೋಗ್ಯವನ್ನು ಉತ್ತೇಜಿಸಿ ಮಗುವಿನ ಸರ್ವಾಂಗೀಣ ಪ್ರಗತಿಗೂ ಸಹಕಾರ ಮಾಡುತ್ತದೆ. ಜೊತೆಗೆ ಶೈಕ್ಷಣಿಕವಾಗಿಯೂ ಮಗು ಬೆಳವಣಿಗೆ ಹೊಂದಲು ಇದು ಪೂರಕವಾಗುತ್ತದೆ. ನಿಮ್ಮ ಮಗುವಿಗೆ ದೈನಂದಿನ ಜೀವನದಲ್ಲಿ ನೀವು ನೀಡುವ ಆಹಾರದೊಂದಿಗೆ ಈ ಅಂಶಗಳನ್ನು ಸೇರಿಸಿ. ಇದರಿಂದ ಮಗುವಿನ ದೈಹಿಕ ಹಾಗೂ ಮೆದುಳಿನ ಆರೋಗ್ಯ ಅಭಿವೃದ್ದಿಯಾಗುತ್ತದೆ.
ಮಕ್ಕಳ ಮೆದುಳಿನ ಬೆಳವಣಿಗೆ ಹಾಗೂ ನೆನಪು ಶಕ್ತಿಯನ್ನು ವೃದ್ದಿಸುವ ನಿಟ್ಟಿನಲ್ಲಿ ಬೆರಿ ಹಣ್ಣುಗಳನ್ನು ಮಕ್ಕಳಿಗೆ ಆಹಾರವಾಗಿ ನೀಡುವುದನ್ನು ಮರೆಯದಿರಿ. ಉತ್ತಮ ಪೋಷಕಾಂಶಗಳನು ಹೊಂದಿರುವ ಉತ್ಕರ್ಷಣ ನಿರೋಧಕ ಅಂಶ ಹೊಂದಿದ ಪಾಲಕ್, ಕೇಲ್, ಬ್ರೊಕೊಲಿಯಾ, ಕ್ಯಾರೆಟ್, ಮೊದಲಾದ ಹಸಿ ತರಕಾರಿ, ಸೊಪ್ಪು ತರಕಾರಿಗಳನ್ನು ಸಾಕಷ್ಟು ನೀಡಿ. ಇದರಿಂದ ಮೆದುಳಿನ ಆರೋಗ್ಯ ವೃದ್ದಿಯಾಗುತ್ತದೆ. ದ್ವಿದಳ ಧಾನ್ಯ, ಬೇಳೆ ಕಾಳುಗಳು, ಬಾದಾಮಿ, ಅಗಸೆಬೀಜ, ವಾಲ್ ನಟ್ಸ್ ಗಳನ್ನು ಮಿತ ಪ್ರಮಾಣದಲ್ಲಿ ನಿತ್ಯ ನೀಡುತ್ತಿರಿ. ಮೆದುಳಿನ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳು ಹೇರಳವಾಗಿ ಇವುಗಳಿಂದ ಲಭ್ಯವಾಗುತ್ತವೆ. ಆಹಾರದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿ.