ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ನೀರಿನ ರಭಸ ಜೋರಾಗಿದ್ದು, ಉಕ್ಕಿ ಹರಿಯುವ ನೀರನ್ನು ನೋಡಲು ವೀಕೆಂಡ್‌ಗೂ ಕಾಯದ ಜನ ಆಗಮಿಸುತ್ತಿದ್ದಾರೆ.
ಆದರೆ ರಸ್ತೆಯಲ್ಲಿ ಹೋಗುವಾಗ ಗಾಡಿ ನಿಲ್ಲಿಸಿ ಫೋಟೊ ತೆಗೆದುಕೊಳ್ಳುವುದು, ಇಳಿದು ರಸ್ತೆ ಬದಿ ಕುಳಿತು ತಿಂಡಿ ತಿನ್ನುವುದು ಮಾಡಬೇಡಿ. ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರವಾಗಿರಿ. ಜೋಗ ಜಲಪಾತಕ್ಕೆ ಹೋಗುವ ರಸ್ತೆಯಲ್ಲೇ ಕರಿ ಚಿರತೆಯೊಂದು ಹಸುವನ್ನು ಬೇಟೆಯಾಡಿದೆ.
ಸಾಗರ ತಾಲೂಕಿನ ವಡನಬೈಲಿನಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವನ್ನು ಬೇಟೆಯಾಡಿ ಪೊದೆಯೊಳಗೆ ಎಳೆದೊಯ್ದಿದೆ. ಇದನ್ನು ಪ್ರವಾಸಿಗರೊಬ್ಬರು ನೋಡಿ ಹೆದರಿದ್ದಾರೆ. ಬೇರೆಯವರಿಗೆ ಮಾಹಿತಿ ನೀಡಿದ್ದಾರೆ.