ತಲೆ ಕೆಳಗಾಗಿ ತೆಂಗಿನ ಮರ ಹತ್ತೋದು ನೋಡಿದ್ದೀರಾ? ಇಲ್ಲಿದೆ ವೈರಲ್ ವಿಡಿಯೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮರಗಳನ್ನು ತಲೆ‌ ಮೇಲೆ‌ ಮಾಡಿ ಏರುವುದು ಸಹಜ. ಆದರೆ, ಯುವಕನೊಬ್ಬ ತಲೆ ತಗ್ಗಿಸಿ ಮರ ಏರಿದ ಅಚ್ಚರಿ ಘಟನೆ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ.

ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಈಶ್ವರ ಜಿಡಗಣ್ಣವರ ಎಂಬ ಯುವಕ ತೆಂಗಿನ ಮರ ಹತ್ತುವುದನ್ನು ಕರಗತ ಮಾಡಿಕೊಂಡಿದ್ದಾನೆ. ಸತತ ಪ್ರಯತ್ನದಿಂದ ತಲೆಬಾಗಿ ಮರ ಹತ್ತುವ ಸಾಧನೆ ಮಾಡಿದ್ದಾರೆ.

ತಲೆಕೆಳಗಾಗಿ ಮರ ಹತ್ತುವ ವಿಡಿಯೋ ನೋಡಿದ ನೆಟ್ಟಿಗರು ಶಹಬಾಸ್ ಗಿರಿ ನೀಡಿದ್ದಾರೆ. ಯುವಕನೊಬ್ಬ ತಲೆಕೆಳಗಾಗಿ ಮರ ಏರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು ಫುಲ್ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!