ಸಾಮಾನ್ಯವಾಗಿ ಸಂಜೆ ನಾಲ್ಕಾಗುತ್ತಿದ್ದಂತೆಯೇ ಮನೆಯಲ್ಲಿ ಕಿಟಕಿ ಬಾಗಿಲುಗಳನ್ನು ಹಾಕಿಕೊಳ್ತೇವೆ. ಬೆಳಗ್ಗೆ ಕಾಣಿಸದ ಸೊಳ್ಳೆಗಳು ಸಂಜೆಯಷ್ಟೊತ್ತಿಗೆ ಮನೆ ತುಂಬಾ ಇರುತ್ತವೆ. ಸೊಳ್ಳೆಗಳು ಹಗಲು ಹೊತ್ತು ಯಾಕೆ ಬರೋದಿಲ್ಲ?
ನಿಜ ಹೇಳಬೇಕಂದ್ರೆ ಸೊಳ್ಳೆಗಳು ಇಡೀ ದಿನ ಆಕ್ಟೀವ್ ಆಗಿಯೇ ಇರುತ್ತವೆ. ಸಂಜೆಯಷ್ಟೊತ್ತಿಗೆ ಗಾಳಿಯ ಮೂವ್‌ಮೆಂಟ್ ಕಡಿಮೆ ಇರುತ್ತದೆ. ಆ ವೇಳೆ ಕಾರ್ಬನ್ ಡೈ ಆಕ್ಸೈಡ್ ಹಾಗೂ ಮನುಷ್ಯರ ಚರ್ಮದ ವಾಸನೆ ಸೊಳ್ಳೆಗಳಿಗೆ ತಾಗುತ್ತದೆ. ಜನರನ್ನು ಹುಡುಕಿಕೊಂಡು ಮನೆಗೆ ಬರುತ್ತವೆ.