ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಇರುವ ಪೋಸ್ಟ್ ಆಫೀಸ್‌ಗಳಿಗಿಂತ ಸ್ಪೆಷಲ್ ಆದ ಒಂದು ಪೋಸ್ಟ್ ಆಫೀಸ್ ಭಾರತದಲ್ಲಿದೆ ಎಂದು ನಿಮಗೆ ಗೊತ್ತಾ? ಅದು ಸಾಮಾನ್ಯದಲ್ಲ ನೀರಿನಲ್ಲಿ ತೇಲೋ ಪೋಸ್ಟ್ ಆಫೀಸ್.
ಹೌದು! ಈ ಪೋಸ್ಟ್ ಆಫಿಸ್ ಜಮ್ಮು ಕಾಶ್ಮೀರದ ಶ್ರೀನಗರದ ದಾಲ್ ಸರೋವರದ ಮೇಲಿದೆ. ಬ್ರಿಟಿಷರ ಕಾಲದಲ್ಲಿ ಈ ಪೋಸ್ಟ್ ಆಫೀಸ್ ಸ್ಥಾಪಿಸಲಾಗಿತ್ತು. ನಂತರ 2011 ರಲ್ಲಿ ಈ ಅಂಚೆ ಕಚೇರಿಯನ್ನು ನವೀಕರಿಸಲಾಯಿತು. ಈಗ ಈ ಪೋಸ್ಟ್ ಆಫಿಸ್ ಪ್ರವಾಸಿಗರ ತಾಣವಾಗಿಯೂ ಮಾರ್ಪಟ್ಟಿದೆ.
ಪತ್ರಗಳು, ಪೋಸ್ಟ್‌ಕಾರ್ಡ್‌ಗಳು, ಬ್ಯಾಂಕಿಂಗ್ ಸೌಲಭ್ಯಗಳು ಸೇರಿದಂತೆ ಸಾಮಾನ್ಯ ಅಂಚೆ ಸೇವೆಗಳು ಇಲ್ಲಿ ಲಭ್ಯವಿದೆ. ಸಾಂಪ್ರದಾಯಿಕ ಕಾಶ್ಮೀರಿ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ಹೌಸ್ ಬೋಟ್‌ನಲ್ಲಿ ಪೋಸ್ಟ್ ಆಫೀಸ್ ಕಾರ್ಯನಿರ್ವಹಿಸುತ್ತದೆ.
ಇಲ್ಲಿಂದ ಕಳುಹಿಸುವ ಪತ್ರಗಳಲ್ಲಿ ದಾಲ್ ಸರೋವರದ ಚಿತ್ರವಿರುವ ಸುಂದರವಾದ ಮುದ್ರೆಯನ್ನು ಹಾಕಲಾಗುತ್ತದೆ. ಶ್ರೀನಗರಕ್ಕೆ ಬರುವ ಪ್ರವಾಸಿಗಳು ನೆನಪಿಗಾಗಿ ತಮ್ಮ ಪ್ರೀತಿ ಪಾತ್ರರಿಗೆ ಒಂದು ಲೆಟರ್ ಕಳಿಸಿ ಕೊಡೋದು ಇಲ್ಲಿ ಸಾಮಾನ್ಯವಾಗಿದೆ.