BABY CARE | ಮಗುವಿಗೆ ಸಾಲಿಡ್ ಫುಡ್ ಶುರು ಮಾಡ್ತಿದ್ದೀರಾ? ನಿಮಗಾಗಿ ಕೆಲವು ಫುಡ್ ಆಪ್ಷನ್ಸ್ ಇಲ್ಲಿದೆ..

ಮಕ್ಕಳಿಗೆ ಸಾಲಿಡ್ ಫುಡ್ ಶುರು ಮಾಡುವ ಮುನ್ನ ಎರಡು ವಿಷಯಗಳನ್ನು ಗಮನದಲ್ಲಿ ಇಡಿ. ಮಕ್ಕಳಿಗೆ ಒಂದು ವರ್ಷದವರೆಗೆ ಉಪ್ಪು, ಎರಡು ವರ್ಷದವರೆಗೆ ಸಕ್ಕರೆ ನೀಡಬೇಡಿ. ಇನ್ನು ಮಕ್ಕಳಿಗೆ ಯಾವುದಾದರೂ ಪದಾರ್ಥದಿಂದ ಅಲರ್ಜಿ ಆಗುತ್ತಿದೆಯೇ ಎಂದು ಗಮನಿಸಿ ನಂತರ ಆಹಾರ ನೀಡಿ. ಮಕ್ಕಳಿಗೆ ಉಪ್ಪು ಸಕ್ಕರೆ ಇಲ್ಲದೆ ಮಾಡಬಹುದಾದ ಆಹಾರಗಳಿವು..

Starting Solid Foods - HealthyChildren.org

  1. ಕುಕ್ಕರ್‌ಗೆ ಎರಡು ಸ್ಪೂನ್ ಅಕ್ಕಿ ಅಥವಾ ಅವಲಕ್ಕಿ ಹಾಕಿ, ಇದಕ್ಕೆ ನಿಮ್ಮಿಷ್ಟದ ತರಕಾರಿ, ಕ್ಯಾರೆಟ್, ಬಟಾಣಿ, ಗೆಣಸು ಹಾಕಿ. ನಂತರ ಎರಡು ಒಣದ್ರಾಕ್ಷಿ, ಡ್ರೈಫ್ರೂಟ್ಸ್ ಪುಡಿ, ಅರಿಶಿಣ, ಚಿಟಿಕೆ ಕಾಳುಮೆಣಸು ಪುಡಿ,ಜೀರಿಗೆ ಪುಡಿ ಹಾಕಿ ಸಣ್ಣ ಉರಿಯಲ್ಲಿ ಒಂದು ವಿಶಲ್ ಹಾಕಿಸಿ. ನಂತರ ಮಿಕ್ಸಿ ಮಾಡಿ ತುಪ್ಪ ಹಾಕಿ ತಿನ್ನಿಸಿ

    10 Easy Homemade Baby Food Ideas (No-Cook, Super Fast, Stage 1)

  2. ಓಟ್ಸ್ ಬಿಸಿ ಮಾಡಿ ಪುಡಿ ಮಾಡಿಕೊಳ್ಳಿ ನಂತರ ಒಂದು ಸ್ಪೂನ್ ಪುಡಿಗೆ ನೀರು ಹಾಕಿ, ಇದಕ್ಕೆ ಯಾವುದಾದರೂ ಹಣ್ಣುಗಳು, ಬಾಳೆಹಣ್ಣು, ಸೇಬು, ಸಪೋಟ, ಪಪಾಯ ಹಾಕಿ ತುಪ್ಪ ಹಾಕಿ ಮಕ್ಕಳಿಗೆ ತಿನ್ನಿಸಬಹುದು.

    How to Make Oatmeal For Babies | Eat Well With Lex

  3. ರಾಗಿ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ನಂತರ ಹುರಿಯಿರಿ, ಇದಕ್ಕೆ ಸೋಯಾ, ಮೆಂತೆ, ಡ್ರೈಫ್ರೂಟ್ಸ್, ಅಕ್ಕಿ, ಬೇಳೆ ಎಲ್ಲವನ್ನೂ ಹುರಿದು ಸೇರಿಸಿ ಪುಡಿ ಮಾಡಿ ಇಡಿ. ಒಂದು ಸ್ಪೂನ್ ಹಿಟ್ಟನ್ನು ತಣ್ಣೀರಿನಲ್ಲಿ ಕಲಸಿ ಎರಡು ನಿಮಿಷ ಬೇಯಿಸಿ ಬಿಸಿ ಬಿಸಿ ಮಗುವಿಗೆ ತಿನ್ನಿಸಿ

    Best Ragi Porridge for Infants - Yummy Kids Food

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!